ಅಮೆರಿಕಾದಲ್ಲಿ ಮೊದಲ ಸಿಖ್ ನ್ಯಾಯಾಧೀಶೆಯಾದ ಮೋನಿಕಾ ಸಿಂಗ್

ಹೂಸ್ಟನ್,ಜ.9- ಅಮೆರಿಕದ ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಭಾರತೀಯ ಮೂಲದ ಮನ್‍ಪ್ರೀತ್ ಮೋನಿಕಾ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಯುಎಸ್‍ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೂಸ್ಟನ್‍ನಲ್ಲಿ ಹುಟ್ಟಿ ಬೆಳೆದಿರುವ ಅವರು ತನ್ನ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಲಾರಾಯ್‍ನಲ್ಲಿ ವಾಸಿಸುತ್ತಿದ್ದು, ಅವರು ಟೆಕ್ಸಾಸ್‍ನ ಕಾನೂನು ಸಂಖ್ಯೆ 4 ರಲ್ಲಿ ಹ್ಯಾರಿಸ್ ಕೌಂಟಿ ಸಿವಿಲ್ ಕೋರ್ಟ್‍ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 1970ರ ದಶಕದಲ್ಲಿ ಸಿಂಗ್ ಅವರ ತಂದೆ ಅಮೆರಿಕಾಕ್ಕೆ ವಲಸೆ ಬಂದಿದ್ದರು. […]