ಮೈಸೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವಿವಾಹಿತ ಮಹಿಳೆಯ ಕೊಲೆ

ಮೈಸೂರು,ಫೆ.3- ವಿವಾಹಿತ ಮಹಿಳೆಯೋಬ್ಬಳನ್ನುಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ. ಅಡ್ಡಬಂದ ಮಹಿಳೆಯ ತಾಯಿ ಮೇಲೂ ಹಲ್ಲೇ ನಡೆಸಿದ ಆರೋಪಿಪರಾರಿಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸುನೀತಾ (30) ಮೃತ ದುರ್ದೈವಿಯಾಗಿದ್ದು, ತಾಯಿ ಭಾರತಿ ಗಂಭೀರ ಗಾಯಗೊಂಡುಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಿರೀಶ್ ಕೊಲೆ ಮಾಡಿರುವ ಆರೋಪಿ. ಕ್ಯಾತಮಾರನಹಳ್ಳಿಯ ಶ್ರೀಕಂಠೇಶ್ವರ ಶಾಲೆ ಬಳಿ ಘಟನೆ ನಡೆದಿದೆ. ಮೃತಳಿಗೂ ಹಾಗೂ ಆರೋಪಿ ಗಿರೀಶ್ ನಡುವೆ ಲವ್ ಕಹಾನಿ ಇತ್ತೆಂದು ಹೇಳಲಾಗಿದೆ.ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದರೆಂದು ಹೇಳಲಾಗಿದೆ. […]