“ತಾಕತ್ತಿದ್ರೆ ನನ್ನ ಹಿಡಿಯಿರಿ” ಎಂದು ಪೊಲೀಸರಿಗೆ ಸವಾಲ್ ಹಾಕಿ ಸಿಕ್ಕಿಬಿದ್ದ ಕಾಮುಕ..!

ಬೆಂಗಳೂರು,ಮಾ.5- ಮಹಿಳಾ ವಕೀಲರು, ಪೊಲೀಸ್ ಅಧಿಕಾರಿಗಳು ಸೆರಿ 100ಕ್ಕೂ ಹೆಚ್ಚು ಮಹಿಳೆಯರಿಗೆ ಕದ್ದ ಮೊಬೈಲ್‍ಗಳಿಂದ ಅಶ್ಲೀಲ ಸಂದೇಶ ಕಳುಹಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುವುದರ ಜೊತೆಗೆ ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸರಿಗೆ ನೇರ ಸವಾಲು ಹಾಕಿದ್ದ ಖತರ್ನಾಕ್ ಆರೋಪಿ ಸಿಕ್ಕಿಬಿದ್ದಿದ್ದಾನೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಕೊಡಿಗೆಹಳ್ಳಿ ಹೋಬಳಿ, ಮೈದುನಹಳ್ಳಿ ಗ್ರಾಮದ ಕೃಷ್ಣ ಅಲಿಯಾಸ್ ರಾಮಕೃಷ್ಣ ಅಲಿಯಾಸ್ ಮಂಜುನಾಥ ಅಲಿಯಾಸ್ ಚೂಲ್‍ಮಂಜ ಅಲಿಯಾಸ್ ಸೈಕೋ ಮಂಜ ಅಲಿಯಾಸ್ ಪ್ರಶಾಂತ ಅಲಿಯಾಸ್ ಪ್ರವೀಣ ಅಲಿಯಾಸ್ ದಿವ್ಯರಾಜ್(37) […]