ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ, ಮೂವರ ಬಂಧನ

ಬೆಂಗಳೂರು, ಮಾ.16- ರೈಲ್ವೆ ನಿಲ್ದಾಣದ ಮುಂದೆ ಡ್ರಮ್ನಲ್ಲಿ ಪತ್ತೆಯಾದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿರುವ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೂಲತಃ ಬಿಹಾರ ರಾಜ್ಯದ ಕಮಾಲ್(21), ತನ್ವೀರ್(28), ಶಾಕೀಬ್(25) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಕೊಲೆಯಾದ ಮಹಿಳೆಯನ್ನು ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆ ನಿವಾಸಿ ತಮನ್ನಾ(27) ಎಂದು ಗುರುತಿಸಲಾಗಿದೆ. ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಪೊರ್ಟಿಕೊ ಮುಂದೆ ಒಂದು ನೀಲಿ ಬಣ್ಣದ ಡ್ರಮ್ನಲ್ಲಿ ಮಾ. 13ರಂದು ಮಹಿಳೆ ಶವ ಪತ್ತೆಯಾಗಿತ್ತು.ಮೇಲ್ನೋಟಕ್ಕೆ ಈ […]