ಮಹಿಳೆಯರು, ಮಕ್ಕಳು ಎಚ್ಚರದಿಂದ ಇರಿ : ಸಚಿವ ಸುಧಾಕರ್

ಬೆಂಗಳೂರು,ಜ.13- ಕೋವಿಡ್ ಮೂರನೆ ಅಲೆ ಎರಡರಿಂದ ಎರಡೂವರೆ ದಿನದಲ್ಲೇ ದ್ವಿಗುಣವಾಗುತ್ತಿದ್ದು, ಲಸಿಕೆ ಪಡೆಯದವರು ಮತ್ತು ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಅಲೆಯಲ್ಲಿ 10ರಿಂದ 12 ದಿನಕ್ಕೆ ಹಾಗೂ ಎರಡನೇ ಅಲೆಯಲ್ಲಿ 8ದಿನಕ್ಕೆ ಕೋವಿಡ್ ಸೋಂಕಿನ ಪ್ರಮಾಣ ದ್ವಿಗುಣವಾಗತ್ತಿತ್ತು. ಆದರೆ, ಇದೀಗ ಮೂರನೆ ಅಲೆ ಎರಡರಿಂದ ಎರಡೂವರೆ ದಿನದಲ್ಲೇ ದ್ವಿಗುಣವಾಗುತ್ತಿದೆ ಎಂದರು. 15ರಿಂದ 18 ವರ್ಷದ ಮಕ್ಕಳು, ಲಸಿಕೆ ಪಡೆಯದವರು ಹಾಗೂ […]