ಗರ್ಭಿಣಿಯರಿಗೆ ನಿಯಮಾವಳಿ, ಎಸ್‍ಬಿಐಗೆ ಮಹಿಳಾ ಆಯೋಗ ನೋಟೀಸ್

ನವದೆಹಲಿ,ಜ.29- ಮೂರು ತಿಂಗಳಿಗೂ ಹೆಚ್ಚಿನ ಗರ್ಭಿಣಿಯರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಿ ಅವರನ್ನು ಹೆರಿಗೆಯಾದ ನಾಲ್ಕು ತಿಂಗಳ ಒಳಗೆ ಕೆಲಸಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ನೂತನ ನಿಯಮ ಮಾಡಿರುವ ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಈ ನಿಯಮ ವಾಪಸ್ ಪಡೆಯಬೇಕು ಎಂದು ಸೂಚಿಸಿ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯೂ) ಇಂದು ನೋಟಿಸ್ ಜಾರಿ ಮಾಡಿದೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‍ಬಿಐ ಈ ಬಗ್ಗೆ ತತ್‍ಕ್ಷಣದಲ್ಲಿ ಪ್ರತಿಕ್ರಿಯೆ ನೀಡಿಲ್ಲ. ಎಸ್‍ಬಿಐನ ಈ ಕ್ರಮ ತಾರತಮ್ಯದಿಂದ ಕೂಡಿದೆ ಮತ್ತು ಕಾನೂನು […]