ಪ್ರಾರ್ಥನೆ ಸಲ್ಲಿಸುವವರ ಮೇಲೆ ಭಾರತದಲ್ಲೂ ದಾಳಿ ನಡೆಸಲ್ಲ : ಪಾಕ್ ಸಚಿವ

ಇಸ್ಲಾಮಾಬಾದ್, ಫೆ.1- ಪ್ರಾರ್ಥನೆ ಸಲ್ಲಿಸುವ ಭಕ್ತರ ಮೇಲೆ ಭಾರತದಲ್ಲೂ ದಾಳಿ ನಡೆಸುವುದಿಲ್ಲ. ಅಂತಹ ಘಟನೆ ಪಾಕಿಸ್ತಾನದಲ್ಲಿ ನಡೆದಿರುವುದು ಅವಮಾನಕರವಾಗಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅಭಿಪ್ರಾಯಪಟ್ಟಿದ್ದಾರೆ. ಪೇಶಾವರದ ಮಸೀದಿ ಮೇಲೆ ಉಗ್ರರು ನಡೆಸಿದ ದಾಳಿ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 100ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆಯನ್ನು ಉಲ್ಲೇಖಿಸಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಭಾರತ ಅಥವಾ ಇಸ್ರೇಲ್‍ನಂತಹ ದೇಶಗಳಲ್ಲೂ ಇಂತಹ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಏಕತೆ ಪ್ರದರ್ಶಿಸುವಂತೆ ಮನವಿ […]