ಕೋಟ್ಯಂತರ ರೂ.ಮೌಲ್ಯದ ರೈಲ್ವೆ ಹಳಿಗಳೇ ಮಾಯ.. !

ಸಮಸ್ತಿಪುರ್,ಫೆ.7- ಬಿಹಾರದಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ರೈಲ್ವೇ ಹಳಿ ನಾಪತ್ತೆ ಪ್ರಕರಣ ಬೆಳಕಿಗೆ ಬಂದಿದೆ. ಸಮಸ್ತಿಪುರ್ ರೈಲ್ವೇ ವಿಭಾಗದಲ್ಲಿ ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿಗಳ ಸಹಕಾರದಿಂದ ಕೋಟ್ಯಂತರ ಮೌಲ್ಯ ರೈಲ್ವೆ ಹಳಿಗಳನ್ನು ಅಕ್ರಮವಾಗಿ ಸ್ಕ್ರಾಪ್ ಡೀಲರ್‍ಗೆ ಮಾರಾಟ ಮಾಡಲಾಗಿದೆ. ಹಗರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರೈಲ್ವೆ ಇಲಾಖೆ ಅಧಿಕಾರಿಗಳು ಆರ್‍ಪಿಎಫ್‍ನ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಸಮಸ್ತಿಪುರ್ ರೈಲ್ವೇ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಅಗರ್ವಾಲ, ತನಿಖೆಗೆ ಇಲಾಖಾ ಮಟ್ಟದ […]