ಚಿನ್ನ ಕರಗಿಸುವ ಅಂಗಡಿ ಮೇಲೆ ದಾಳಿ : 36 ಕೆಜಿ ಚಿನ್ನ, 20 ಲಕ್ಷ ನಗದು ವಶ

ಮುಂಬೈ,ಜ.25- ಮುಂಬೈನ ಝವೇರಿ ಬಜಾರ್‍ನಲ್ಲಿರುವ ಚಿನ್ನದ ಅಂಗಡಿಯೊಂದರ ಮೇಲೆ ಕಂದಾಯ ಗುಪ್ತಚರ ವಿಭಾಗದ ನಿರ್ದೇಶಕರ (ಡಿಆರ್‍ಐ) ತಂಡ ದಾಳಿ ನಡೆಸಿ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ದೊಡ್ಡ ದಂಧೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಝವೇರಿ ಬಜಾರ್‍ನ ಅಂಗಡಿಯೊಂದರಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಕರಗಿಸುವ ಕೆಲಸ ನಡೆಯುತ್ತಿತ್ತು. ರ್ನಿಧಿಷ್ಟ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಡಿಆರ್‍ಐ ತಂಡ, 36 ಕೆಜಿ ಚಿನ್ನ ಮತ್ತು 20 ಲಕ್ಷ ರೂ. ಮೌಲ್ಯದ ನಗದನ್ನು ವಶಪಡಿಸಿಕೊಳ್ಳಲಾಗಿದೆ. 27ರಂದು ಹುಬ್ಬಳ್ಳಿಗೆ ಅಮಿತ್ ಷಾ ಆಗಮನ, ನಾಯಕರಿಗೆ ಹೊಸ […]

11 ಕೋಟಿ ರೂಪಾಯಿ ಮೌಲ್ಯದ ಬ್ರೌನ್‍ಶುಗರ್ ಪತ್ತೆ

ಇಂಫಾಲ,ಜ.23- ದೇಶದ ಗಡಿ ರಾಜ್ಯವಾಗಿರುವ ಮಣಿಪುರದಲ್ಲಿ ಅತ್ಯಧಿಕ ಮೊತ್ತದ ಬ್ರೌನ್‍ಶುಗರ್ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 11 ಕೋಟಿ ರೂಪಾಯಿ ಮೌಲ್ಯದ ಎಂಟು ಕೆಜಿ ಮಾದಕ ದ್ರವ್ಯವನ್ನು ಇಂಪಾಲ ಜಿಲ್ಲೆಯಲ್ಲಿ ವಶಪಡಿಸಿಕೊಂಡು, ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ಗ್ರೇಟರ್ ಇಂಫಾಲ್‍ನ ಕಿಯಾಮ್‍ಗೆಯ್ ಥೋಂಗ್‍ಖಾಂಗ್ ಪ್ರದೇಶದಿಂದ ಪೊಲೀಸರು ತಪಾಸಣೆ ನಡೆಸುವಾಗ ಎಂಟು ಪ್ಯಾಕೆಟ್‍ಗಳಲ್ಲಿ ಅಡಗಿಸಿಡಲಾಗಿದ್ದ ಮಾದಕ ವಸ್ತು ಪತ್ತೆಯಾಗಿದೆ. ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಂಧಿಸಲಾಗಿದ್ದು, ಮಾದಕ ವಸ್ತುಗಳು ಎಲ್ಲಿಂದ ತರಲಾಗಿತ್ತು. ಕಾಂಗ್ರೆಸ್ […]

ಆರೋಪಿ ಸೆರೆ : 10 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳ ವಶ

ಬೆಂಗಳೂರು, ಜ.19- ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ 10 ಲಕ್ಷ ರೂ. ಬೆಲೆಬಾಳುವ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಸುಬ್ರಮಣ್ಯಪುರ ಮುಖ್ಯರಸ್ತೆಯ ವಸಂತ ಪುರದ ನಿವಾಸಿ ಯಾಸೀನ್(31) ಬಂಧಿತ ಆರೋಪಿ. ಬನಶಂಕರಿ ಎರಡನೇ ಹಂತದ 23ನೇ ಕ್ರಾಸ್‍ನಲ್ಲಿ ಲಕ್ಷ್ಮಣ ಬಗಲೂರ ಎಂಬುವರು ನಿಲ್ಲಿಸಿದ್ದ 15 ಸಾವಿರ ಬೆಲೆಯ ಸ್ಕೂಟರ್ ಕಳ್ಳತನವಾಗಿತ್ತು. ಈ ಬಗ್ಗೆ ಬನಶಂಕರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯೊಬ್ಬನನ್ನು […]

ಎರಡುವರೆ ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶ

ಐಜ್ವಾಲ್,ಜ.18- ನಿರ್ದಿಷ್ಟ ಮಾಹಿತಿಯ ಮೇರೆಗೆ ಅಸ್ಸಾಂ ರೈಫಲ್ಸ್ ಸಿಬ್ಬಂದಿ, ರಾಜ್ಯ ಅಬಕಾರಿ ಮತ್ತು ಮಾದಕ ದ್ರವ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಐಜ್ವಾಲ್‍ನ ಬಾಂಗ್ಕಾವ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ 503 ಗ್ರಾಂ ಹೆರಾಯಿನ್ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದೆ. ಮಾದಕ ವಸ್ತು ಹೆರಾಯಿನ್ ಅನ್ನು 40 ಸೋಪ್ ಕೇಸ್‍ಗಳಲ್ಲಿ ಮರೆಮಾಡಲಾಗಿತ್ತು. ಇದರ ಒಟ್ಟು ಮೌಲ್ಯ 2.51 ಕೋಟಿ ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ. ವೈರಲ್ ಆಯ್ತು ಬಿಜೆಪಿ ಮುಖಂಡನ ಪುತ್ರನ ರೌಡಿಸಂ ವಿಡಿಯೋ ಮಾದಕ ವಸ್ತುವನ್ನು ಅಬಕಾರಿ ಮತ್ತು […]

1 ಕೋಟಿ ಮೌಲ್ಯದ ಡ್ರಗ್ಸ್ ವಶ, 16 ನೈಜೀರಿಯನ್ನರನ್ನು ಬಂಧನ

ಥಾಣೆ,ಜ.1-ಮಹಾರಾಷ್ಟ್ರದ ನವಿ ಮುಂಬೈ ನಗರದಲ್ಲಿ ರೋ ಹೌಸ್‍ನಲ್ಲಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 16 ನೈಜೀರಿಯನ್ ಪ್ರಜೆಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಪೂರೈಕೆಗಾಗಿ ಕೆಲವು ಆಫ್ರಿಕನ್ನರು ಮಾದಕ ದ್ರವ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಸುಳಿವಿನ ಮೇರೆಗೆ ನಿನ್ನೆ ಮನೆಯ ಮೇಲೆ ದಾಳಿ ನಡೆಸಲಾಯಿತು ಎಂದು ನವಿ ಮುಂಬೈ ಪೊಲೀಸ್ ಉಪ ಕಮಿಷನರ್ (ಅಪರಾಧ) ಅಮಿತ್ ಕಾಳೆ ತಿಳಿಸಿದ್ದಾರೆ. ವಶಪಡಿಸಿಕೊಂಡ ಡ್ರಗ್ಸ್ 1,00,70,000 ರೂ ಮೌಲ್ಯದ ಗಾಂಜಾ, […]

ನಕಲಿ NOC ಸೃಷ್ಟಿಸಿ ಭಾರೀ ವಂಚನೆ, 90 ಲಕ್ಷ ಮೌಲ್ಯದ ಕಾರುಗಳ ವಶ

ಬೆಂಗಳೂರು,ಡಿ.23- ಕಾರುಗಳಿಗೆ ಸಾಲ ನೀಡಿದ್ದ ಬ್ಯಾಂಕ್ ಮತ್ತು ಫೈನಾನ್ಸ್ಗಳ ನಕಲಿ ಎನ್ಒಸಿಗಳನ್ನು ಸೃಷ್ಟಿಸಿ ಸೆಕೆಂಡ್ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವನ್ನು ಬನಶಂಕರಿ ಠಾಣೆ ಪೊಲೀಸರು ಪತ್ತೆಹಚ್ಚಿ ಮೂವರನ್ನು ಬಂಧಿಸಿ 90 ಲಕ್ಷ ಮೌಲ್ಯದ ಏಳು ಕಾರು ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಭಾಕರ(40), ಪ್ರಕಾಶ್ ಅಲಿಯಾಸ್ ಚೀಟಿ ಪ್ರಕಾಶ(33) ಮತ್ತು ಕಿರಣ್ (44) ಬಂಧಿತ ವಂಚಕರು. ಆರೋಪಿಗಳಿಂದ 90 ಲಕ್ಷ ರೂ. ಬೆಲೆಬಾಳುವ ಮಾರುತಿ ಸುಜುಕಿ ಸಿಯಾಜ್ ಕಾರು, ಟಯೋಟೊ ಫಾರ್ಚುನರ್, ಟೊಯೊಟೊ ಇನ್ನೋವಾ ಕ್ರಿಸ್ಟಾ, ಟೆಂಪೊ ಟ್ರಾವೆಲ್ಲರ್, […]

2.70 ಕೋಟಿ ಮೌಲ್ಯದ ಚರಸ್-ಎಂಡಿಎಂಎ ವಶ

ಬೆಂಗಳೂರು, ಡಿ.20- ಡಿಜಿ ಹಳ್ಳಿ ಪೊಲೀಸರು ಮೂರು ಪ್ರಕರಣಗಳನ್ನು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ಸುಮಾರು 2.10 ಕೋಟಿ ರೂ. ಮೌಲ್ಯದ 6 ಕೆಜಿ ಚರಸ್ ಮತ್ತು 60 ಲಕ್ಷ ಮೌಲ್ಯದ 1.1 ಕೆಜಿ ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಕಲೇಟ್ ಕವರ್‍ನಲ್ಲಿ ಚರಸ್:ಮಾದಕ ವಸ್ತು ಚರಸ್ ಅನ್ನು ಚಾಕಲೇಟ್ ಕವರ್‍ಗಳಲ್ಲಿಟ್ಟು ನಗರದ ಪ್ರತಿಷ್ಠಿತ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್‍ವೇರ್ ಉದ್ಯೋಗಿಗಳಿಗೆ, ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿಜಿ ಹಳ್ಳಿಯ ಮುನಿವೀರಪ್ಪ ಬ್ಲಾಕ್ […]

ಕೇರಳ ಸಹಕಾರಿ ಬ್ಯಾಂಕ್ ಏಜೆಂಟ್‍ನ 30.70 ಕೋಟಿ ಆಸ್ತಿ ಜಪ್ತಿ

ಕೊಚ್ಚಿ , ಡಿ. 6- ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕರುವನ್ನೂರ್ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಕಮಿಷನ್ ಏಜೆಂಟ್‍ನೊಬ್ಬನ 30.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಎ ಕೆ ಬಿಜೋಯ್ ಎಂಬ ಏಜೆಂಟ್ ಇಡಿ ಬಿಸಿ ಮುಟ್ಟಿಸಿದೆ, ಅಧಿಕಾರಿಗಳ ಪ್ರಕಾರ ಜಪ್ತಿಯಾದ ಆಸ್ತಿ ವಿವರ ನೋಡಿದರೆ ಅಚ್ಚರಿಯಾಗುತ್ತದೆ. ಕೇರಳ ರಾಜ್ಯದ ವಿವಿದೆಢೆ 20 ಸ್ಥಿರ ಆಸ್ತಿಗಳಿವೆ ಇದಲ್ಲದೆ ಎರಡು ಕಾರುಗಳು, 3,40 ಲಕ್ಷ ರೂ ನಗದು […]

ಬೆಳ್ಳಂ ಬೆಳಗ್ಗೆ ಜೆಸಿಬಿ ಘರ್ಜನೆ : 30 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶ

ಬೆಂಗಳೂರು,ನ.22- ಸರ್ಕಾರಿ ಭೂಮಿ ಒತ್ತುವರಿ ತೆರೆವು ಕಾರ್ಯಾಚರಣೆ ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇಂದು ಬೆಳಿಗ್ಗೆ 30 ಕೋಟಿ ರೂ. ಮೌಲ್ಯದ 22 ಗುಂಟೆ ಜಾಗವನ್ನು ತನ್ನ ವಶಕ್ಕೆ ಪಡೆದಿದೆ. ಬಿಡಿಎಗೆ ಸೇರಿದ್ದ ಜೆಪಿ ನಗರ 9 ನೇ ಹಂತದ 1 ನೇ ಬ್ಲಾಕ್ ನಲ್ಲಿನ ಆಲಹಳ್ಳಿ ಸರ್ವೆ ಸಂಖ್ಯೆ 4/1 ರಲ್ಲಿ ಈ ಜಾಗವನ್ನು ಕೆಲವು ಅತಿಕ್ರಮಣದಾರರು ಕಳೆದ ಹತ್ತು ವರ್ಷಗಳಿಂದ ತಾತ್ಕಾಲಿಕ್ ಶೆಡ್‍ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಬಿಡಿಎ ಆಯುಕ್ತರ ಆದೇಶದನ್ವಯ […]

8.7 ಕೋಟಿ ಮೌಲ್ಯದ ಹೆರಾಯಿನ್ ವಶ

ಮಿಜೋರಾಂ.10- ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ವಿಶೇಷ ಪೊಲೀಸ್ ತಂಡ ಸುಮಾರು 8.70 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ. ಮುಂಜಾನೆ ಪುಕ್ಪುಯಿ ಪ್ರದೇಶದ ಟ್ಲಾಂಗ್ ಸೇತುವೆ ಬಳಿ ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ 1.74 ಕೆಜಿ ಡ್ರಗ್ಸ್ ಅನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ ಎಮದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಇಬ್ಬರು ಚಂಫೈನ ನಿವಾಸಿಗಳಾಗಿದ್ದು ಮಾದಕವಸ್ತು ನಿಯಂತ್ರಣ ಕಾಯ್ಧೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು ಕಾರ್ಯಾಚರಣೆಯಲ್ಲಿ […]