ಹೊಸ ವರ್ಷಕ್ಕೆ ಕಿಕ್ಕೇರಿಸಿಕೊಳ್ಳಲು ತಂದಿದ್ದ 6 ಕೋಟಿ ಮೌಲ್ಯದ ಡ್ರಗ್ಸ್ ವಶ..!

ಬೆಂಗಳೂರು, ಡಿ.30- ನೂತನ ವರ್ಷದ ಸಂಭ್ರಮಾಚರಣೆ ಅಂಗವಾಗಿ ನಗರದಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡಲು ತಯಾರಿ ನಡೆಸಿದ್ದ 8 ಮಂದಿ ಅಂತರ್ರಾಜ್ಯ ಡ್ರಗ್ ಪೆಡ್ಲರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಅಂದಾಜು 6.31 ಕೋಟಿಗೂ ಅಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಐವರಿಕೋಸ್ಟ್, ಕೋಸ್ಟರಿಕ ದೇಶದ ಡ್ರಗ್ ಪೆಡ್ಲರ್ಗಳು ಹಾಗೂ 6 ಮಂದಿ ಭಾರತೀಯ ಆರೋಪಿಗಳು ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.ಕಾವೊ ಎಸ್ಸೆ ಸಬಾಸ್ಟೀನ್(19), ಆಗ್ಬು ಚಿಕೆ ಅಂಥೋನಿ, ರಾಮಣ್ಣ, ಇರ್ಫಾನ್, ಬಾಷಾ, ಮೊಹಮ್ಮದ್ ಮುಜಾಯಿದ್, ಇಲಿಯಾಜ್ ಬಂಧಿತರು. […]