ಶ್ರೀಲಂಕಾಕ್ಕೆ 2 ವಿಕೆಟ್‍ಗಳ ಸೋಲು : ಟೆಸ್ಟ್ ಫೈನಲ್‍ಗೇರಿದ ಭಾರತ

ಕ್ರಿಸ್ಟ್‍ಚರ್ಚ್, ಮಾ. 13- ನ್ಯೂಜಿಲೆಂಡ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡವು 2 ವಿಕೆಟ್‍ಗಳ ಸೋಲು ಕಾಣುವ ಮೂಲಕ ಐಸಿಸಿ ಆಯೋಜನೆಯ 2ನೇ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್‍ಗೇರುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ. ಶ್ರೀಲಂಕಾದ ಈ ಸೋಲಿನಿಂದಾಗಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಫಲಿತಾಂಶಕ್ಕೆ ಕಾಯದೆಯೇ ಫೈನಲ್‍ಪಂದ್ಯದ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2 ಟೆಸ್ಟ್‍ಗಳಲ್ಲೂ ಶ್ರೀಲಂಕಾ ಕ್ಲೀನ್ ಸ್ವೀಪ್ ಮಾಡಿದ್ದರೆ ಆಗ ಫೈನಲ್‍ನಲ್ಲಿ ಆಡುವ ಅವಕಾಶ ಪಡೆಯಬಹುದಿತ್ತು. ಟೆಸ್ಟ್ ಸ್ವರೂಪದ ನಂಬರ್ 1 ತಂಡವಾಗಿರುವ ಆಸ್ಟ್ರೇಲಿಯಾ […]