ಆಘಾತಕಾರಿ ಸಂಗತಿ, ವಿಶ್ವಾದ್ಯಂತ ವನ್ಯಜೀವಿಗಳ ಸಂಖ್ಯೆಯಲ್ಲಿ 69% ಕುಸಿತ..!

ನವದೆಹಲಿ.ಅ.13-ಕಳೆದ 1970 ಮತ್ತು 2018 ರ ನಡುವೆ ಜಗತ್ತಿನಾದ್ಯಂತ ವನ್ಯಜೀವಿಗಳ ಸಂಖ್ಯೆಯು ಶೇಕಡಾ 69 ರಷ್ಟು ಕುಸಿದಿದೆ ಎಂದು ವಿಶ್ವ ವನ್ಯಜೀವಿ ಸಂಸ್ಥೆಯ ತಿಳಿಸಿದೆ. ಲಿವಿಂಗ್ ಪ್ಲಾನೆಟ್ ವರದಿ 2022 ರ ಪ್ರಕಾರ ಉಷ್ಣವಲಯದ ಪ್ರದೇಶಗಳಲ್ಲಿ ವನ್ಯಜೀವಿಗಳ ಜನಸಂಖ್ಯೆಯು ದಿಗ್ಭ್ರಮೆಗೊಳಿಸುವ ದರದಲ್ಲಿ ಕುಸಿಯುತ್ತಿದೆ ಎಂದು ಎಚ್ಚರಿಸಲಾಗಿದೆ. ಅಮೇರಿಕಾ ಮತ್ತು ಕೆರಿಬಿಯನ್ ಪ್ರದೇಶಗಳು ಜಾಗತಿಕವಾಗಿ ಮೇಲ್ವಿಚಾರಣೆ ಮಾಡಿದ ವನ್ಯಜೀವಿ ಜನಸಂಖ್ಯೆಯ ಅತಿದೊಡ್ಡ ನಷ್ಟ ಉಂಟಾಗಿದೆ ಈ ಅವಧಿಯಲ್ಲಿ ಸರಾಸರಿ ಶೇಕಡಾ 94 ರಷ್ಟು ಕುಸಿತವಾಗಿದೆ ಎಂದು ವರದಿ ಹೇಳಿದೆ. […]