ವಿಜಯೇಂದ್ರಗೆ ಸಿಎಂ ಸ್ಥಾನ ಸಿಗಲೆಂದು ಅಶ್ವಮೇಧ ಯಾಗ

ಮಂಡ್ಯ.ಅ.27-ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ 2023ರ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ನಗರದ ಕಾಳಿಕಾಂಬ ದೇವಾಲಯದ ಆವರಣದಲ್ಲಿ ಅಭಿಮಾನಿಗಳು ಅಶ್ವಮೇಧ ಯಾಗ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶಿವಕುಮಾರ ಆರಾಧ್ಯ ಮಾತನಾಡಿ,ಮಂಡ್ಯದ ಕಾಳಿಕಾಂಬ ದೇವಾಲಯದಲ್ಲಿ ವಿಶೇಷವಾಗಿ ಅಶ್ವಮೇಧ ಯಾಗಕ್ಕೆಂದು ಒಂದು ಕುದರೆಯನ್ನು ತರಿಸಿ ಯಾಗ ನಡೆಸಲಾಗಿದೆ ಎಂದರು. ಅಶ್ವಮೇಧಯಾಕ್ಕೆಂದು ದ್ವಾಪರ ಕಾಲಯುಗದಲ್ಲಿ ಕುದುರೆಯ ಸಾರಥ್ಯವನ್ನು ಅರ್ಜುನ ವಹಿಸಿದ್ದರು. ಅದೇರೀತಿ ಈ ಯಾಗ ನಡೆಸಿ ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ನಮ್ಮೆಲ್ಲರ ಹಾಗೂ ಅಭಿಮಾನಿಗಳ ಆಶಯವಾಗಿದೆ. […]