ಮರಕ್ಕೆ ಅಪ್ಪಳಿಸಿದ ಪಿಕಪ್ ವಾಹನ, ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ 6 ಭಕ್ತರ ಸಾವು

ಬೆಳಗಾವಿ, ಜ.5- ಯಲ್ಲಮ್ಮನ ಗುಡ್ಡಕ್ಕೆ ನಡೆದುಕೊಂಡು ಹೋಗುತ್ತಿದ್ದ ಯಾತ್ರಾರ್ಥಿಗಳನ್ನು ಮಾರ್ಗಮಧ್ಯೆ ವಾಹನದಲ್ಲಿ ಹತ್ತಿಸಿಕೊಂಡ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ವಾಹನ ಮರಕ್ಕೆ ಅಪ್ಪಳಿಸಿದ ಪರಿಣಾಮ ಆರು ಮಂದಿ ಯಾತ್ರಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ಕಟಕೋಳ ಪೆಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಮೃತರನ್ನು ಹನುಮವ್ವ ನಾಕಾಡಿ(25), ದೀಪಾ(31), ಸುಪ್ರಿತಾ(12), ಮಾರುತಿ(42), ಸವಿತಾ(17), ಇಂದ್ರವ್ವ(24) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದವರು ಎಂದು ಪೊಲಿಸರು ತಿಳಿಸಿದ್ದಾರೆ. ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ […]