ಮುಗಿಯದ ಮೆಟ್ರೋ ಅವಾಂತರ : ಅದೃಷ್ಟವಶಾತ್ ತಪ್ಪಿದ ಮತ್ತೊಂದು ದುರಂತ

ಬೆಂಗಳೂರು,ಫೆ.25- ನಿರ್ಮಾಣ ಹಂತದ ಪಿಲ್ಲರ್ ಕುಸಿದು ತಾಯಿ-ಮಗು ಬಲಿಯಾಗಿದ್ದರೂ ಮೆಟ್ರೋ ಮಾತ್ರ ಬುದ್ದಿ ಕಲಿತಂತೆ ಕಾಣುತ್ತಿಲ್ಲ.ನಮ್ಮ ಮೆಟ್ರೋ ಸಂಸ್ಥೆಯ ಮತ್ತೊಮ್ಮೆ ಎಡವಟ್ಟಿನಿಂದ ಸಂಭವಿಸಬೇಕಿದ್ದ ದುರಂತ ಕೂದಲೆಳೆ ಅಂತರದಿಂದ ಪಾರಾಗಿದೆ. ಯಶವಂತಪುರದ ಸಮೀಪದ ಸೋಪ್ ಕಾರ್ಖಾನೆ ಸಮೀಪದ ಮೆಟ್ರೋ ನಿಲ್ದಾಣದ ಮುಂಭಾಗ ಚಲಿಸುತ್ತಿದ್ದ ಕಾರಿನ ಮೇಲೆ ಬಾರಿಪ್ರಮಾಣದ ಕಬ್ಬಿಣದ ತುಂಡು ಬಿದ್ದಿದೆ. ಮೆಟ್ರೋ ನಿಲ್ದಾಣದ ಮೇಲ್ಬಾಗದಿಂದ ಬಿದ್ದ ಕಬ್ಬಿಣ ಬಿದ್ದ ರಭಸಕ್ಕೆ ಕಾರು ಜಖಂಗೊಂಡಿದೆ. ಒಂದು ವೇಳೆ ಕಬ್ಬಿಣ ಬೈಕ್ ಸವಾರನ ಮೇಲೆ ಬಿದ್ದಿದರೆ ಸ್ಥಳದಲ್ಲೇ ಪ್ರಾಣ ಪಕ್ಷಿ […]