ತುಂಬಿತುಳುಕುತ್ತಿರುವ ಯರವಾಡ ಜೈಲು

ಪುಣೆ,. 12- ಪುಣೆಯ ಯರವಾಡ ಕೇಂದ್ರ ಕಾರಾಗೃಹ ಕೈದಿಗಳಿಂದ ತುಂಬಿ ಹೋಗಿದ್ದು, ಹೆಚ್ಚುವರಿ ಬ್ಯಾರಕ್‍ಗಳನ್ನು ನಿರ್ಮಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿರುವುದಾಗಿ ಮಹಾರಾಷ್ಟ್ರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಜೈಲುಗಳು) ಅಮಿತಾಭ್ ಗುಪ್ತಾ ಹೇಳಿದ್ದಾರೆ. ಮಕರ ಸಂಕ್ರಾಂತಿ ವಿಶೇಷ ಸಂದರ್ಭದಲ್ಲಿ ಕೈದಿಗಳು ತಯಾರಿಸಿದ ವಿವಿಧ ವಸ್ತುಗಳು ಮತ್ತು ಉತ್ಪನ್ನಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೈದಿಗಳು ತಯಾರಿಸಿದ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಶೀಘ್ರದಲ್ಲೇ ಇ-ಕಾಮರ್ಸ್ ವೆಬ್‍ಸೈಟ್‍ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದರು. 2022ರ ನವೆಂಬರ್ ವೇಳೆ ಯರವಾಡ ಜೈಲಿನಲ್ಲಿ […]