ವೃದ್ಧರಿಗೆ ವಂಚಿಸುತ್ತಿದ್ದ ಪಿಎಚ್‍ಡಿ ಪದವೀಧರ ಅಂದರ್

ದಾವಣಗೆರೆ, ಮಾ.5- ಓದಿಗೆ ತಕ್ಕ ಕೆಲಸ ಸಿಗದೆ ಎಟಿಎಂ ಅದಲು-ಬದಲು ಮಾಡಿ ಹಣ ವಂಚಿಸುತ್ತಿದ್ದ ಪಿಹೆಚ್‍ಡಿ ಪದವೀಧರನೊಬ್ಬನನ್ನು ಬಂಧಿಸಿರುವ ಪೊಲೀಸರು ಬಂಧಿತನಿಂದ 8,58,800 ರೂ. ವಶಪಡಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಹಾವೇರಿ ಜಿಲ್ಲೆ ರಾಣೇಬೆನ್ನೂರು ಮೂಲದ ಯೋಗಾನಂದ್(47) ಬಂಧಿತ ಆರೋಪಿ. ಇಂಗ್ಲೀಷ್ ವಿಷಯದಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದು, ಪಿಹೆಚ್‍ಡಿ ಮಾಡಿದ್ದ ಈತ ಅವಿವಾಹಿತನಾಗಿದ್ದು, ಯಾವುದೇ ಉದ್ಯೋಗ ಸಿಗದೆ ಎಟಿಎಂನಿಂದ ಹಣ ತೆಗೆದುಕೊಡುವ ನೆಪದಲ್ಲಿ ವೃದ್ಧರಿಗೆ ವಂಚಿಸುತ್ತಿದ್ದ ಎಂದರು. ಹಣ […]