ಮೊಬೈಲ್‍ಗಾಗಿ ಬಾವಿಗಿಳಿದು ಪ್ರಾಣ ಕಳೆದುಕೊಂಡ ಯುವಕ..!
ಶಿಡ್ಲಘಟ್ಟ, ಜ.30- ಬಾವಿಯೊಳಗೆ ಬಿದ್ದ ಮೊಬೈಲ್ ತೆಗೆಯಲು ಹೋದ ಯುವಕ ಉಸಿರು ಗಟ್ಟಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದಿದೆ. ಅನಿಲ್‍ಕುಮಾರ್ (35) ಮೃತಪಟ್ಟ ಯುವಕ. ತೋಟದಲ್ಲಿರುವ ಶೆಡ್ ಬಳಿ ಕೆಲಸ ಮಾಡುತ್ತಿದ್ದಾಗ ಮೂಬೈಲ್ ಕೈ ಜಾರಿ ಶೆಡ್ ನಲ್ಲಿರುವ ಕಿರು ಬಾವಿಗೆಬಿದ್ದಿದೆ. ಬಾವಿಯಲ್ಲಿ ಬಿದ್ದ ಮೋಬೈಲ್ ತೆಗೆದುಕೊಳ್ಳಲು ಯುವಕ ಬಾವಿಗಿಳಿದಿದ್ದಾನೆ ಮಧ್ಯಾಹ್ನವಾದರೂ ಅನಿಲ್ ಮನೆಗೆ ಬಾರದಿದ್ದಾಗ ಮನೆಯವರು ಹುಡುಕಿಕೊಂಡು ಜಮೀನಿನ ಬಳಿಗೆ ಬಂದಿದ್ದಾರೆ. ಬಾವಿ ಬಳಿ ಚಪ್ಪಲಿಗಳು ಇರುವುದನ್ನು ಗಮನಿಸಿದ ಸಹೋದರ ಅನುಮಾನಗೊಂಡು ಬಾವಿಗಿಳಿದು ನೋಡಲು […]