ರಷ್ಯಾಗೆ ಶಾಕ್ ಕೊಟ್ಟ ಯೂಟ್ಯೂಬ್, ಫೇಸ್‍ಬುಕ್

ಕ್ಯಿವ್,ಫೆ.27- ವಿಡಿಯೋ ಸಂಗ್ರಹಗಳ ಧೈತ್ಯ ಸಂಸ್ಥೆ ಯೂಟ್ಯೂಬ್ ರಷ್ಯಾ ಮೂಲದ ಸಂಸ್ಥೆಗಳಿಂದ ಹಣ ಪಡೆಯುವುದನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಯೂಟ್ಯೂಬ್‍ನಲ್ಲಿ ಪ್ರಸಾರವಾಗುವ ರಷ್ಯಾ ಸರ್ಕಾರಿ ಸ್ವಾಮ್ಯದ ಚಾನಲ್ ಹಾಗೂ ಖಾಸಗಿ ಸುದ್ದಿ ಸಂಸ್ಥೆಗಳ ವಿಡಿಯೋಗಳ ಜೊತೆ ಜಾಹಿರಾತನ್ನು ಪ್ರಕಟಿಸಿ ಹಣ ಪಡೆಯಲಾಗುತ್ತಿತ್ತು. ಆದರೆ ಯುದ್ದ ಸನ್ನಿವೇಶದಲ್ಲಿ ಯೂಟ್ಯೂಬ್, ಫೇಸ್‍ಬುಕ್ ಮಾದರಿಯಲ್ಲೇ ಹಣ ಸ್ವೀಕಾರವನ್ನು ನಿಲ್ಲಿಸಿದೆ.