ವೈಎಸ್‍ಆರ್ ಕಾಂಗ್ರೆಸ್ ಸಂಸದನ ಪುತ್ರ ಅರೆಸ್ಟ್

ನವದೆಹಲಿ,ಫೆ.11- ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಿಸಿದಂತೆ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಾಗುಂಟ ಶ್ರೀನಿವಾಸಲು ಅವರ ಪುತ್ರ ರಾಘವ್ ಮಾಗುಂಟ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಆಂಧ್ರಪ್ರದೇಶದ ಒಂಗೋಲ್ ಕ್ಷೇತ್ರದ ಸಂಸದರಾಗಿರುವ ಮಾಗುಂಟ ಶ್ರೀನಿವಾಸಲು ಅವರ ಪುತ್ರ ರಾಘವ್‍ನನ್ನು ದೆಹಲಿ ಅಬಕಾರಿ ನೀತಿ ಪ್ರಕರಣದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಅಬಕಾರಿ ನೀತಿ ಪ್ರಕರಣದಡಿ ಇದುವರೆಗೂ 8 ಮಂದಿಯನ್ನು ಬಂಧಿಸಲಾಗಿದೆ. ರಾಘವ್ ಬಂಧಿತ […]