ಎನ್‍ಟಿಆರ್ ಪ್ರತಿಮೆ ಭಗ್ನ: ಶಾಸಕನ ಮೇಲೆ ಎಫ್‍ಐಆರ್

ಗುಂಟೂರು, ಜ.3- ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಮಾಜಿ ಸಿಎಂ ಎನ್.ಟಿ.ರಾಮ್‍ರಾವ್‍ರ ಪ್ರತಿಮೆಯನ್ನು ಭಗ್ನಗೊಳಿಸಲು ಪ್ರಯತ್ನಿಸಿದ ಶಾಸಕರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಗುಂಟೂರಿನ ದುರ್ಗಿ ಗ್ರಾಮದಲ್ಲಿರುವ ಎನ್.ಟಿ. ರಾಮರಾವ್‍ರ ಪ್ರತಿಮೆಯನ್ನು ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ (ವೈಎಸ್‍ಆರ್‍ಸಿಪಿ)ಯ ಶೆಟ್ಟಿಪಿಳ್ಳೈ ಕೋಟೇಶ್ವರ ರಾವ್ ಅವರು ಸುತ್ತಿಗೆಯನ್ನು ಬಳಸಿ ಭಗ್ನಗೊಳಿಸಲು ಯತ್ನಿಸಿದ್ದಾರೆ. ನಂದಮೂರಿ ತರಕಾ ರಾಮರಾವ್ ತೆಲುಗು ಚಿತ್ರರಂಗದ ಶ್ರೇಷ್ಠ ಕಲಾವಿದರಾಗಿದ್ದರಲ್ಲದೆ, 1983 ರಿಂದ 1995ರವರೆಗೂ 3 ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ರಾಜ್ಯದ […]