ಚಂದ್ರನ ಸಮಯ ವಲಯ ಸ್ಥಾಪನೆಗೆ ಮನವಿ

ನವದೆಹಲಿ,ಮಾ.7-ಚಂದ್ರನ ಮೇಲೆ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ದೇಶಗಳು ತುರ್ತಾಗಿ ಚಂದ್ರನ ಸಮಯ ವಲಯಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ ಕರೆ ನೀಡಿದೆ. ಭವಿಷ್ಯದ ಕೆಲವು ಬಾಹ್ಯಾಕಾಶ ನೌಕೆಗಳು ಸಂವಹನ ಮತ್ತು ಒಟ್ಟಿಗೆ ಕೆಲಸ ಮಾಡುವುದರಿಂದ ಭೂಮಿಯ ನೈಸರ್ಗಿಕ ಉಪಗ್ರಹವು ತನ್ನದೇ ಆದ ಸಮಯ ವಲಯವನ್ನು ಹೊಂದುವ ಅವಶ್ಯಕತೆಯಿದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ ಇಂತಹ ಕರೆ ನೀಡಿದೆ ಎಂದು ಅಲ್ಲಿನ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಚಂದ್ರನ ಮೇಲೆ ಇರುವ ಸಮಯವನ್ನು ಉತ್ತಮವಾಗಿ ಟ್ರ್ಯಾಕ್ ಮಾಡಲು […]

ಅಪಘಾತಗಳ ನಗರಿ ಎಂಬ ಕುಖ್ಯಾತಿ ಪಾತ್ರವಾದ ಸಿಲಿಕಾನ್‍ಸಿಟಿ ಬೆಂಗಳೂರು

ಬೆಂಗಳೂರು,ಡಿ.3- ಸಿಲಿಕಾನ್ ಸಿಟಿ, ಹೈಟೆಕ್ ಸಿಟಿ, ನಿವೃತ್ತರ ಸ್ವರ್ಗ ಎಂಬೆಲ್ಲಾ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು, ಇದೀಗ ಅಪಘಾತಗಳ ನಗರಿ ಎಂಬ ಕುಖ್ಯಾತಿಗೂ ಗುರಿಯಾಗಿದೆ. ಖಾಸಗಿ ವಿಮಾ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಪ್ರತಿವರ್ಷ ಬೆಂಗಳೂರಿನಲ್ಲೇ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಆಕ್ಸಿಡೆಂಟ್ ಹೆಚ್ಚು ಆಗಲು ಕಾರಣವೇನು..? ಯಾವೆಲ್ಲಾ ಏರಿಯಾಗಳು ಆಕ್ಸಿಡೆಂಟ್ ಆಗೋ ಹಾಟ್ ಸ್ಪಾಟ್ ಗಳು..? ಹೆಚ್ಚು ರಸ್ತೆ ಅಫಘಾತಕ್ಕೆ ಎಡೆ ಮಾಡಿಕೊಡ್ತಿರೋರು ಯಾರು ಎನ್ನುವ ಅಂಕಿ ಅಂಶಗಳನ್ನು ಖಾಸಗಿ ವಿಮಾ ಸಂಸ್ಥೆ ಬಿಡುಗಡೆ ಮಾಡಿದೆ. […]

ಹಲವು ಯೋಜನೆಗಳಿಂದ ಕರಾವಳಿ ಪರಿಸರಕ್ಕೆ ಧಕ್ಕೆ : ಸಿಎಜಿ ವರದಿ ಆಕ್ಷೇಪ

ನವದೆಹಲಿ, ಆ.9- ಸ್ವಾಯತ್ತ ಸ್ಥಾನ-ಮಾನ ಹೊಂದಿರುವ ಕೇಂದ್ರ ಲೆಕ್ಕಪರಿಶೋಧಕರ ಸಂಸ್ಥೆ (ಸಿಎಜಿ) ಸಂಸ್ಥೆ ಹೊಸ ವರದಿಯೊಂದು ನೀಡಿದ್ದು, ಅದರಲ್ಲಿ 2015 ರಿಂದ 2020ರ ನಡುವೆ ಅಸಮರ್ಪಕ ತಜ್ಞರ ವರದಿ ಪಾಲನೆ ಮಾಡಿ, ಪರಿಸರಕ್ಕೆ ಧಕ್ಕೆಯಾಗುವಂತೆ ಕರಾವಳಿ ತೀರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂಬಆಕ್ಷೇಪ ವ್ಯಕ್ತ ಪಡಿಸಿದೆ. 2019ರಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಕರಾವಳಿ ವಲಯ ಸಂರಕ್ಷಣೆ ನಿಯಮಗಳ ಪ್ರಕಾರ ಸಮುದ್ರದ ಏರಿಳಿತಗಳ ರೇಖೆಯಿಂದ 500 ಮೀಟರ್ ಅಂತರದಲ್ಲಿ, ಕೆರೆಗಳು, ತೊರೆಗಳು, ನದಿಮುಖಗಳು, ಹಿನ್ನೀರಿನನಿಂದ ಕನಿಷ್ಠ 100 […]