ತೈಪೆ,ಡಿ.22- ಚೀನಾ ನಮ್ಮ ದೇಶದ ಮಾರ್ಗವಾಗಿ 39 ವಿಮಾನಗಳು, ಮೂರು ಹಗಡುಗಳನ್ನು ರವಾನೆ ಮಾಡಿದೆ ಎಂದು ತೈವಾನ್ ಸರ್ಕಾರ ಆರೋಪಿಸಿದೆ. ಸ್ವಯಂ ಆಡಳಿತ ಹೊಂದಿರುವ ತೈಪೆಯನ್ನು ಚೀನಾದ ಮಿಲಿಟರಿ ತನ್ನದೆಂದು ಪ್ರತಿಪಾದಿಸುತ್ತಿದೆ.
ತನ್ನ ಪ್ರಾಂತ್ಯವೆಂಬ ಚೀನಾದ ಹಕ್ಕು ಪ್ರತಿಪಾದನೆ ಇತ್ತೀಚಿನ ವರ್ಷದಲ್ಲಿ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ. ಚೀನಾದ ಕಮ್ಯೂನಿಸ್ಟ್ ಆಡಳಿತದ ಲಿಬರೇಷನ್ ಆರ್ಮಿ ವಿಮಾನ ಮತ್ತು ಹಡಗುಗಳನ್ನು ತನ್ನ ದೇಶದ ಮೂಲಕ ದೀಪಕ್ಕೆ ಸಾಗಾಣಿಕೆ ಮಾಡಿದೆ ಎಂದು ತೈಪೆ ಆರೋಪಿಸಿದೆ.
ಬುಧವಾರ ಮತ್ತು ಗುರುವಾರ ಬೆಳಗ್ಗೆ 6 ಗಂಟೆಗೆ 30 ವಿಮಾನಗಳು ತೈವಾನ್ನ ಜಲಮಾರ್ಗವನ್ನು ಹಾದು ಹೋಗಿವೆ. ಪ್ರತಿ ದಿನ ನಿಯಮಿತವಾಗಿ ವಿಮಾನಗಳು ತೈವಾನನ್ನು ದಾಟುತ್ತಿವೆ. ಅನಧಿಕೃತವಾಗಿ ಸದ್ದಿಲ್ಲದೆ ಒಪ್ಪಿಕೊಳ್ಳಲಾದ ಎರಡು ಭಾಗದ ಗಡಿಯಲ್ಲಿ ಚೀನಾ ತನ್ನ ವಿಮಾನಗಳನ್ನು ಹಾರಿಸುತ್ತಿದೆ ಎಂದು ಆರೋಪಿಸಲಾಗಿದೆ.
ವಿಮಾನ ಪ್ರಯಾಣಕ್ಕಿಂತ ದುಬಾರಿಯಾಯ್ತು ಖಾಸಗಿ ಬಸ್ ದರ
ದೀಪದ ನೈರುತ್ಯ ಭಾಗ ಮತ್ತು ಅಡ್ಡಲಾಗಿ ವಿಮಾನಗಳು ಸಂಚರಿಸಿವೆ. ನಂತರ ದಕ್ಷಿಣ ವಲಯದಿಂದ ದ್ವಿಗುಣ ಪ್ರಮಾಣದಲ್ಲಿ ಮರಳಿವೆ. ಹಾರಾಟ ನಡೆಸಿದ ವಿಮಾನಗಳಲ್ಲಿ 21 ಜೆ-16 ಯುದ್ಧ ವಿಮಾನಗಳು. 4 ಎಚ್-6 ಬಾಂಬರ್ಗಳು, ಎರಡು ಎಚ್ಚರಿಕೆಯ ವಿಮಾನಗಳು ಸೇರಿವೆ ಎಂದು ವಿವರಿಸಲಾಗಿದೆ.
ತನ್ನ ನೆಲದ ಮೇಲೆ ಚೀನಾ ನಡೆಸುತ್ತಿರುವ ನಡವಳಿಕೆಗಳನ್ನು ತೈವಾನ್ ತನ್ನದೇ ಆದ ಮಿಸೈಲ್ಸ ವ್ಯವಸ್ಥೆ ಹಾಗೂ ನೌಕಾ ಸೇನೆಯ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಹೇಳಲಾಗಿದೆ. ಅಮೆರಿಕಾದ ಸದನದ ಅಧ್ಯಕ್ಷರಾದ ನ್ಯಾನ್ಸಿ ಪಿಲೋಸಿ ಅವರು ತೈವಾನ್ಗೆ ಭೇಟಿ ನೀಡಿದ ಬಳಿಕ ಕಳೆದ ಆಗಸ್ಟ್ನಲ್ಲಿ ಚೀನಾ ಭಾರೀ ಸಮರಾಭ್ಯಾಸ ನಡೆಸಿತ್ತು.
Taiwan, scrambles jets, warn, Chinese, air force,