ತಾಲಿಬಾನ್ ನಾಯಕರ ಜೊತೆ ಯೂರೋಪ್ ರಾಷ್ಟ್ರಗಳ ಮಾತುಕತೆ

ಓಸ್ಲೋ, ಜ.24- ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಮಧ್ಯೆ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ನೇತೃತ್ವದ ತಾಲಿಬಾನ್ ನಿಯೋಗವು ಭಾನುವಾರ ಪಾಶ್ಚಿಮಾತ್ಯ ಅಧಿಕಾರಿಗಳು ಮತ್ತು ಅಫ್ಘಾನ್ ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಓಸ್ಲೋದಲ್ಲಿ ಮೂರು ದಿನಗಳ ಮಾತುಕತೆ ಆರಂಭಿಸಿದೆ.

ನಾರ್ವೇ ಜಿಯನ್ ರಾಜಧಾನಿಯ ಹೋಟೆಲ್ನಲ್ಲಿರಹಸ್ಯ ಸಭೆಗಳು ನಡೆಯುತ್ತಿವೆ ಮತ್ತು ಆಗಸ್ಟ್ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಅವರ ಪ್ರತಿನಿಧಿಗಳೊಂದಿಗೆ ಯುರೋಪ್ನಲ್ಲಿ ಅಧಿಕೃತ ಸಭೆಗಳನ್ನು ನಡೆಸುತ್ತಿರುವುದು ಇದೇ ಮೊದಲಾಗಿದೆ.

ಮೊದಲ ದಿನದ ಮಾತುಕತೆಯ ನಂತರ ಮಾತನಾಡಿದ ತಾಲಿಬಾನ್ ಪ್ರತಿನಿಧಿ ಶಫಿವುಲ್ಲಾ ಅಜಂ, ಪಾಶ್ಚಿಮಾತ್ಯ ಅಧಿಕಾರಿಗಳೊಂದಿಗಿನ ಸಭೆಗಳು ಅಫ್ಘಾನ್ ಸರ್ಕಾರವನ್ನು ಕಾನೂನುಬದ್ಧಗೊಳಿಸುವ ಒಂದು ಹೆಜ್ಜೆ ಎಂದು ಅಭಿಪ್ರಾಯ ಪಟ್ಟರು. ಆಫ್ಘನಿಸ್ಥಾನದ ಕುರಿತು ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಈ ರೀತಿಯ ರ್ಚೆಗಳು ಸಹಾಯ ಮಾಡುತ್ತವೆ ಎಂದು ಹೇಳಿದ್ದಾರೆ.

ಯಾವುದೇ ದೇಶದಿಂದ ಮನ್ನಣೆ ಪಡೆಯದ ತಾಲಿಬಾನ್ ಜೊತೆಗಿನ ಮಾತುಕತೆಯನ್ನು ವಿರೋಧಿಸಿ ಓಸ್ಲೋದಲ್ಲಿನ ನಾರ್ವೇಜಿಯನ್ ವಿದೇಶಾಂಗ ಸಚಿವಾಲಯದ ಮುಂಭಾಗದ ಸುಮಾರು 200ಕ್ಕೂ ಹೆಚ್ಚು ಪ್ರತಿಭಟನಾಕಾರರು ತಮ್ಮ ಅಸಮಧಾನ ಹೊರ ಹಾಕಿದರು.

ತಾಲಿಬಾನ್ ಅಂತರ ರಾಷ್ಟ್ರೀಯ ಸಮುದಾಯಕ್ಕೆ ತಕ್ಕಂತೆ ಬದಲಾಗಿಲ್ಲ ಎಂದು ನಾರ್ವೆಯಲ್ಲಿ ವಾಸಿಸುತ್ತಿರುವ ಆಫ್ಘನ್ ಅಹ್ಮಾನ್ ಯಾಸಿರ್ ಪ್ರತಿಭಟನೆಯ ವೇಳೆ ಹೇಳಿದ್ದಾರೆ.