ಜಿನೀವಾ, ಜ.18- ಯುದ್ಧ ಸಂತ್ರಸ್ಥವಾಗಿದ್ದ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮಹಿಳೆಯರು, ಬಾಲಕಿಯರ ಮುಖ್ಯವಾಹಿನಿ ಬದುಕನ್ನು ಸ್ಥಿರವಾಗಿ ಅಳಿಸಿ ಹಾಕುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ತಜ್ಞರು ಕಳವಳ ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಾದ ಹಜಾರಾ, ತಾಜಿಕ್, ಹಿಂದೂಗಳ ಮಹಿಳೆಯರ ಪರಿಸ್ಥಿತಿ ದೇಶದಲ್ಲಿ ಇನ್ನಷ್ಟು ದುರ್ಬಲವಾಗಿವೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ದೇಶದಾದ್ಯಂತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಿಂದ ಮಹಿಳೆಯರನ್ನು ಹೊರಗಿಡುವ ನಿರಂತರ ಮತ್ತು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದು 35 ಕ್ಕೂ ಹೆಚ್ಚು ಸ್ವತಂತ್ರಮಾನವ ಹಕ್ಕುಗಳ ಸಂಸ್ಥೆಗಳ ತಜ್ಞರು ಹೇಳಿದ್ದಾರೆ. ಮಹಿಳಾ ವ್ಯವಹಾರಗಳ ಸಚಿವಾಲಯದ ಮುಚ್ಚುವಿಕೆ ಮತ್ತು ಅಫ್ಘಾನಿಸ್ತಾನದ ಸ್ವತಂತ್ರ ಮಾನವ ಹಕ್ಕುಗಳ ಆಯೋಗದ ಆವರಣವನ್ನು ತಾಲಿಬಾನಿಗಳು ತಮ್ಮ ವಶಕ್ಕೆ ತೆಗೆದುಕೊಂಡಿರುವುದನ್ನು ಎನ್‍ಜಿಒಗಳು ಉಲ್ಲೇಖಿಸಿವೆ.
ಕಾನೂನುಬಾಹಿರ ಹತ್ಯೆಗಳು ಮತ್ತು ಹಜಾರಾದಂತಹ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಬಲವಂತದ ಸ್ಥಳಾಂತರಗಳಿಂದ ವಿಚಲಿತರಾಗಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.ಇದು ದೇಶದಿಂದ ಅವರನ್ನು ನಿಧಿಷೇಸಲು ಮತ್ತು ಹೊರಹಾಕಲು ನಡೆಸುತ್ತಿರುವ ಉದ್ದೇಶಪೂರ್ವಕ ಪ್ರಯತ್ನಗಳು ಎಂದು ಮಾನವ ಹಕ್ಕು ಸಂಘಟನೆಗಳು ಆರೋಪಿಸಿವೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್‍ನ ನಾಯಕರು ಮಹಿಳೆಯರು ಮತ್ತು ಹುಡುಗಿಯರ ವಿರುದ್ಧ ಹಿಂಸಾಚಾರವನ್ನು ಬೆಂಬಲಿಸುತ್ತಿದ್ದಾರೆ. ಆಗಸ್ಟ್ 15ರಂದು ತಾಲಿಬಾನಿಗಳು ಆಪ್ಘಾನಿಸ್ತಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಮಹಿಳೆಯರ ಬಟ್ಟೆಗಳ ಕುರಿತು ನಿರ್ಬಂಧಗಳು, ಮದುವೆಯ ಉದ್ದೇಶಗಳಿಗಾಗಿ ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆ, ಬಲವಂತದ ದುಡಿಮೆ ಸೇರಿದಂತೆ ಹಲವು ರೀತಿಯ ಅಪಾಯಗಳನ್ನು ಮಹಿಳಾ ಸಮುದಾಯ ಎದುರಿಸುತ್ತಿದೆ.
ಮಹಿಳೆಯರ ಚಳುವಳಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕಿಕ್ಕುವುದು, ಸಾರ್ವಜನಿಕ ಮತ್ತು ರಾಜಕೀಯ ವ್ಯವಹಾರಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಸೀಮಿತಗೊಳಿಸಲಾಗುತ್ತಿದೆ. ಈ ನೀತಿಗಳು ಮಹಿಳೆಯರ ಕೆಲಸ ಮತ್ತು ಜೀವನ ಮಾಡುವ ಸಾಮಥ್ರ್ಯದ ಮೇಲೆ ಪರಿಣಾಮ ಬೀರಲಿದೆ. ಅವರನ್ನು ಮತ್ತಷ್ಟು ಬಡತನಕ್ಕೆ ತಳ್ಳುತ್ತದೆ ಎಂದು ತಜ್ಞರು ಹೇಳಿದ್ದಾರೆ.
