ಬಂಧನದಲ್ಲಿಟ್ಟುಕೊಂಡಿದ್ದ ಇಬ್ಬರು ಪತ್ರಕರ್ತರನ್ನು ಬಿಡುಗಡೆ ಮಾಡಿದ ತಾಲಿಬಾನಿಗಳು

Social Share

ಕಾಬೂಲ್, ಫೆ.12- ಸಂಯುಕ್ತ ರಾಷ್ಟ್ರಗಳ ನಿರಾಶ್ರೀತರ ಉನ್ನತ ಆಯುಕ್ತಾಲಯ (ಯುಎನ್‍ಎಚ್‍ಸಿಆರ್) ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪತ್ರಕರ್ತರನ್ನು ತಾಲಿಬಾನಿಗಳು ಬಿಡುಗಡೆ ಮಾಡಿದ್ದಾರೆ. ಆಫ್ಘಾನಿಸ್ತಾನದಲ್ಲಿ ಅಮೆರಿಕಾ ನಿರಾಶ್ರೀತರಿಗಾಗಿ ಕೆಲಸ ಮಾಡಲು ಜಿನಿವಾ ಮೂಲದ ಯುಎನ್‍ಎಚ್‍ಸಿಆರ್ ಸಹಯೋಗದಲ್ಲಿ ಇಬ್ಬರು ಪತ್ರಕರ್ತರು ತೆರಳಿದ್ದರು.
ಅವರನ್ನು ಮತ್ತು ಅವರ ಜೊತೆ ಕೆಲಸ ಮಾಡುತ್ತಿದ್ದ ಸ್ಥಳೀಯ ಪ್ರಜೆಗಳನ್ನು ತಾಲಿಬಾನಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್‍ನ ಮಾಜಿ ಪತ್ರಕರ್ತ ಆಂಡ್ರ್ಯೋ ನಾರ್ಥ್ ಸೇರಿದಂತೆ ಇಬ್ಬರ ಬಂಧನಕ್ಕೆ ಅಂತರರಾಷ್ಟ್ರೀಮ ಮಟ್ಟದಲ್ಲಿ ಅಸಹನೆ ಮತ್ತು ಕಳವಳಗಳು ವ್ಯಕ್ತವಾಗಿದ್ದವು.
ಬಂಧನದ ಸುದ್ದಿ ಬಿತ್ತರವಾದ ಕೆಲವೇ ಗಂಟೆಗಳಲ್ಲಿ ಟ್ವಿಟ್ ಮಾಡಿರುವ ತಾಲಿಬಾನ್‍ನ ಸಂಸ್ಕøತಿ ಮತ್ತು ಮಾಹಿತಿ ಸಚಿವಾಲಯದ ಉಪಮುಖ್ಯಮಂತ್ರಿ ಜಬಿಹುಲ್ಲಾ ಮುಜಾಹಿದ್, ವೈಯಕ್ತಿಕ ಗುರುತಿನ ಸ್ಪಷ್ಟ ದಾಖಲೆಗಳು ಇಲ್ಲದಿದ್ದರಿಂದ ಬಂಧಿಸಲಾಗಿತ್ತು. ದಾಖಲೆಗಳನ್ನು ಹಾಜರು ಪಡಿಸಿ ಅವು ಖಚಿತವಾದ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಚುಟುಕಾಗಿ ಪ್ರತಿಕ್ರಿಯಿಸಿರುವ ಯುಎನ್‍ಎಚ್‍ಸಿಆರ್ ಸಂಸ್ಥೆ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಇಬ್ಬರು ಪತ್ರಕರ್ತರು ಮತ್ತು ಅವರೊಂದಿಗಿದ್ದ ಅಫ್ಘಾನ್ ಪ್ರಜೆಗಳ ಬಿಡುಗಡೆಯನ್ನು ಖಚಿತಪಡಿಸಲು ನಮಗೆ ಸಮಾಧಾನವಾಗಿದೆ. ಕಳವಳ ವ್ಯಕ್ತಪಡಿಸಿದ ಮತ್ತು ಸಹಾಯ ನೀಡಿದ ಎಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ. ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡುವ ಬದ್ಧತೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್, ಕಾರ್ಯನಿರ್ವಾಹಕ ಆದೇಶವೊಂದಕ್ಕೆ ಸಹಿ ಹಾಕಿದ್ದಾರೆ. ಅಮೆರಿಕಾದಲ್ಲಿ ಜಪ್ತಿ ಮಾಡಲಾಗಿದ್ದ ಏಳು ಬಿಲಿಯನ್ ಡಾಲರ್ ಆಸ್ತಿಯಲ್ಲಿ 3.5 ಬಿಲಿಯನ್ ಆಸ್ತಿಯನ್ನು 9/11 ಸಂಸ್ಥರ ಕುಟುಂಬಗಳಿಗೆ ನೀಡಲು ಮತ್ತು ಬಾಕಿ ಉಳಿದ 3.5 ಬಿಲಿಯನ್ ಆಸ್ತಿಯನ್ನು ಆಫ್ಘಾನಿಸ್ತಾನದ ಪ್ರಜೆಗಳಿಗೆ ಹಂಚಿಕೆ ಮಾಡಲು ಆದೇಶಿಸಿದ್ದಾರೆ.

Articles You Might Like

Share This Article