ಅಣ್ಣಾಮಲೈಗೆ ಝಡ್ ಕ್ಯಾಟಗರಿ ಭದ್ರತೆ

Social Share

ಚೆನ್ನೈ,ಜ.13- ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಝಡ್ ಕೆಟಗರಿ ಭದ್ರತೆಯನ್ನು ಒದಗಿಸಿದೆ.

ಇನ್ನು ಮುಂದೆ ಅಣ್ಣಾಮಲೈಗೆ 33 ಮಂದಿ ಕಮಾಂಡೋಗಳು ಹಾಗೂ ಸ್ಥಳೀಯ ಪೊಲೀಸರು ಭದ್ರತೆಯನ್ನು ಒದಗಿಸಲಿದ್ದಾರೆ. ಈ ಮೊದಲು ಅಣ್ಣಾಮಲೈಗೆ ಕೇಂದ್ರ ಸರ್ಕಾರ ವೈ ಕೆಟಗರಿ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ ಇತ್ತೀಚೆಗೆ ಅವರಿಗೆ ಪದೇ ಪದೇ ಕೆಲವು ಧಾರ್ಮಿಕ ಮೂಲಭೂತವಾದಿಗಳು ಹಾಗೂ ನಕ್ಸಲ್ ಸಂಘಟನೆಯಿಂದ ಪ್ರಾಣಬೆದರಿಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಝೆಡ್ ಕೆಟಗರಿ ಭದ್ರತೆಯನ್ನು ನೀಡಿದೆ.

ಕೆಲವೇ ಕೆಲವು ಗಣ್ಯ ವ್ಯಕ್ತಿಗಳಿಗೆ ಮಾತ್ರ ಗರಿಷ್ಠ ಮಟ್ಟದ ಭದ್ರತೆಯನ್ನು ಒದಗಿಸಲಾಗುತ್ತದೆ. ಕೇಂದ್ರ ಸಚಿವರು ಹಾಗೂ ಭಯೋತ್ಪಾದಕರು, ನಕ್ಸಲೀಯರು ಮತ್ತು ಧಾರ್ಮಿಕ ಮೂಲಭೂತವಾದಿಗಳಿಂದ ಪ್ರಾಣ ಬೆದರಿಕೆ ಇರುವವರಿಗೆ ಮಾತ್ರ ಗೃಹ ಇಲಾಖೆ ಈ ಭದ್ರತೆಯನ್ನು ನೀಡುತ್ತದೆ.

ಉಪರಾಷ್ಟ್ರಪತಿಯವರ ವಿವಾದಿತ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್

ಕೇಂದ್ರ ಗುಪ್ತಚರ ವಿಭಾಗ ನೀಡುವ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿ ಗೃಹ ಇಲಾಖೆ ಭದ್ರತೆಯನ್ನು ನಿಯೋಜನೆ ಮಾಡುತ್ತದೆ. ಪ್ರಸ್ತುತ ಅಣ್ಣಾಮಲೈಗೆ ಸಿಆರ್‍ಪಿಎಫ್‍ನ 33 ಮಂದಿ ಕಮಾಂಡೋಗಳನ್ನು ಭದ್ರತೆಗೆ ಒದಗಿಸಲಾಗುತ್ತದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಮೂಲತಃ ತಮಿಳುನಾಡಿನ ಅಣ್ಣಾಮಲೈ ಕರ್ನಾಟಕ ಕೇಡರ್‍ನ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ದಕ್ಷ ಅಧಿಕಾರಿ ಎಂದೇ ಅವರು ಗುರುತಿಸಿಕೊಂಡಿದ್ದರು.

ತಮ್ಮ ಸೇವಾ ಅವಧಿಯಲ್ಲಿ ಕಾನೂನು ಬಾಹಿರ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಲ್ಲದೇ ಸಮಾಜ ಘಾತುಕರು ಹಾಗೂ ರೌಡಿಗಳಿಗೆ ಸಿಂಹ ಸ್ವಪ್ನವಾಗಿದ್ದರು. ಹೀಗಾಗಿಯೇ ಅವರನ್ನು ಸಿಂಗಮ್ ಎಂದೇ ಕರೆಯಲಾಗುತ್ತಿತ್ತು.

ರಾಂಚಿ ಹೊರವಲಯದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ

ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಬೇಕೆಂಬ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ತಮಿಳುನಾಡಿನ ಕರೂರು ಜಿಲ್ಲೆಯ ಅರವಕುರುಚಿ ವಿಧಾನಸಭಾ ಕ್ಷೇತ್ರದಿಂದ ಸ್ರ್ಪಧಿಸಿ ಡಿಎಂಕೆ ಅಭ್ಯರ್ಥಿ ಎದುರು ಪರಾಭವಗೊಂಡಿದ್ದರು.

Tamil Nadu, BJP, chief, Annamalai, Z-category, security,

Articles You Might Like

Share This Article