ಸಂಪುಟ ಸೇರಿದ ಸ್ಟಾಲಿನ್ ಪುತ್ರ ಉದಯನಿಧಿ, ಪರವಿರೋಧ ವ್ಯಾಖ್ಯಾನ

Social Share

ಚೆನ್ನೈ, ಡಿ.14- ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಇಂದು ಬೆಳಗ್ಗೆ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ಆರ್.ಎನ್. ರವಿ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂಪುಟದ ಸಚಿವರು ಭಾಗವಹಿಸಿದ್ದರು. ಡಿಎಂಕೆ ಪಕ್ಷದ ಯುವಶಕ್ತಿ ಸಂಪುಟಕ್ಕೆ ಸೇರ್ಪಡೆಯ ಮೂಲಕ ಹೊಸ ಹುಮ್ಮಸ್ಸು ಬಂದಿದೆ ಎಂಬ ವ್ಯಾಖ್ಯಾನಗಳು ನಡೆದಿದೆ.

45 ವರ್ಷದ ಉದಯ ನಿಧಿ ನಟರಾಗಿ, ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಶಾಸಕರಾಗಿ ಚುನಾಯಿತರಾದ ಅವರು ಈಗ ಸಂಪುಟಕ್ಕೂ ಸೇರ್ಪಡೆಯ ಮೂಲಕ ಸಚಿವರಾಗಿದ್ದಾರೆ.

ರಾಹುಲ್‍ಗೆ ಸಾಥ್ ನೀಡಿದ RBI ಮಾಜಿ ಗವರ್ನರ್ ರಘುರಾಮ್ ರಾಜನ್

ಉದಯನಿಧಿಯ ಸೇರ್ಪಡೆಗೆ ಪರ ವಿರೋಧ ಚರ್ಚೆಗಳು ವ್ಯಾಪಕವಾಗಿವೆ. ಇಂದು ಮುಂಜಾನೆ ಸೂರ್ಯೋದಯದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದೆ. ಈ ಮೂಲಕ ತಮಿಳುನಾಡಿನಲ್ಲಿ ಹೊಸ ಸೂರ್ಯನ ಉದಯವಾಗಿದೆ ಎಂದು ಸಂಸದ ಟಿ.ಆರ್.ಬಾಲು ಅವರ ಪುತ್ರ ಮತ್ತು ಶಾಸಕ ಟಿ.ಆರ್.ಬಿ. ರಾಜ ವ್ಯಾಖ್ಯಾನಿಸಿದ್ದಾರೆ.

ರಾಷ್ಟ್ರ ರಾಜಕಾರಣದತ್ತ BRS ಪಕ್ಷದ ಚಿತ್ತ, ದೆಹಲಿಯಲ್ಲಿ ಕಚೇರಿ ಆರಂಭ

ಇದಕ್ಕೆ ವ್ಯತಿರಿಕ್ತವಾಗಿ ತಮಿಳುನಾಡಿನ ಕುಟುಂಬ ರಾಜಕಾರಣ ಅಕ್ಷಮ್ಯ ಹಂತಕ್ಕೆ ತಲುಪುತ್ತಿದೆ ಎಂದು ಸುಮನ್ ಸಿ. ರಾಮನ್ ಆಕ್ಷೇಪಿಸಿದ್ದಾರೆ. ಉದಯನಿಧಿಗೆ ಬಹುತೇಕ ಕ್ರೀಡೆ ಮತ್ತು ಯುವ ಜನ ಸಬಲೀಕರಣ ಇಲಾಖೆ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ.

Tamil Nadu, Chief Minister, MK Stalin, Son, Udhayanidhi, Joins Cabinet,

Articles You Might Like

Share This Article