ತಮಿಳುನಾಡಿನಲ್ಲಿ ನಡೆಯಿತು ಏಷ್ಯಾದ ಮೊದಲ ಮೆಟಾವರ್ಸ್ ಮದುವೆ ಅರತಕ್ಷತೆ

Social Share

ಚೆನ್ನೈ, ಫೆ.8- ಕೊರೊನಾ ಹೊಸ ಹೊಸ ಸಾಧ್ಯತೆಗಳ ಅನ್ವೇಷಣೆಗೆ ಅವಕಾಶ ಮಾಡಿಕೊಟ್ಟಿದ್ದು, ತಮಿಳುನಾಡಿನ ಜೊಡಿಯೊಂದು ತಮ್ಮ ಮದುವೆಯ ನಂತರದ ಅರತಕ್ಷತೆಯನ್ನು ಆಧುನಿಕ ತಂತ್ರಜ್ಞಾನ ಮೆಟಾವರ್ಸ್ ಬಳಕೆ ಮಾಡಿ ಆನ್‍ಲೈನ್‍ನಲ್ಲೇ ಮಾಡಿಕೊಂಡಿದೆ.
ಮದ್ರಾಸ್‍ನ ಐಐಟಿನಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿರುವ 25 ವರ್ಷದ ದಿನೇಶ್ ಎಸ್.ಪಿ. ಮತ್ತು ಜನಗನಂನಿ ರಾಮಸಾಮಿ ಅವರು ಫೆಬ್ರವರಿ 6ರಂದು ವಿವಾಹವಾಗಿದ್ದರು. ತಮ್ಮ ಮದುವೆಯ ಅರತಕ್ಷತೆಗೆ ಬಂಧು ಬಳಗ, ಸ್ನೇಹಿತರನ್ನು ಕರೆಯಲು ನಿರ್ಧರಿಸಿದ್ದರು. ಆದರೆ ಕೊರೊನಾ ಮೂರನೆ ಅಲೆ ಹೆಚ್ಚಿದ್ದ ಕಾರಣ ಮದುವೆ ಸಮಾರಂಭಗಳಿಗೆ ನಿರ್ಬಂಧಗಳಿದ್ದವು.
ಈ ಹಿನ್ನೆಲೆಯಲ್ಲಿ ಮೆಟಾವರ್ಸ್ ತಂತ್ರಜ್ಞಾನದ ಮೋರೆ ಹೋಗಿದ್ದಾರೆ. ಇದು ಆಧುನಿಕತೆ ಮತ್ತು ಸಂಪ್ರದಾಯ ಮಿಶ್ರಣದ ಹೊಸ ಪ್ರಯತ್ನ. ಈ ಪ್ರಯತ್ನ ಏಷ್ಯಾ ಖಂಡದಲ್ಲೇ ಪ್ರಥಮ ಪ್ರಯತ್ನವಾಗಿದೆ ಎಂದು ಹೇಳಲಾಗಿದೆ.
ಮೆಟಾವರ್ಸ್ ವೇದಿಕೆಯಲ್ಲಿ ಏಕಕಾಲಕ್ಕೆ ಪ್ರತ್ಯಕ್ಷವಾಗಿದ್ದ ಅನುಭವ ಪಡೆಯಬಹುದಾಗಿದೆ. ಭವಿಷ್ಯದ ತಂತ್ರಜ್ಞಾನವಾಗಿರುವ ಮೆಟಾವರ್ಸ್‍ನ್ನು ಫೆಸ್‍ಬುಕ್ ನಲ್ಲಿ ಅಳವಡಿಸುವ ಪ್ರಯತ್ನಗಳು ನಡೆದಿವೆ. ಕೆಲ ಸಂಸ್ಥೆಗಳು ಗೇಮಿಂಗ್ ಹಾಗೂ ಇತರ ಉದ್ದೇಶಗಳಿಗೆ ಬಳಕೆ ಮಾಡುತ್ತಿವೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಕೆಟ್ಟಿ ತಾಲೂಕಿನ ಶಿವಲಿಂಗಪುರಂ ಎಂಬ ಪುಟ್ಟ ಗ್ರಾಮದಲ್ಲಿ ನಡೆದ ಈ ಆರತಕ್ಷತೆಯಲ್ಲಿ 200ಕ್ಕೂ ಹೆಚ್ಚು ಜನ ಭಾವಹಿಸಿದ್ದರು. ಏಕಕಾಲಕ್ಕೆ ಅವರ ಮನೆಯ ಬಾಗಿಲಿಗೆ ಮದುವೆಯ ಊಟವನ್ನು ತಲುಪಿಸಲಾಯಿತು. ಬ್ಲಾಕ್‍ಚೈನ್, ಎನ್‍ಎಫ್‍ಟಿ ಮತ್ತು ಕ್ರಿಪ್ರೋದಲ್ಲಿ ತೊಡಗಿರುವ ದಿನೇಶ್ ಎಂಬುವರು ತಮ್ಮ ನವೋದ್ಯಮದಲ್ಲಿ ಈ ಮದುವೆಯ ಅರತಕ್ಷತೆಯನ್ನು ವಿನ್ಯಾಸಗೊಳಿಸಿದ್ದರು.
ನೂತನ ದಂಪತಿ ಹ್ಯಾರಿ ಪಾಟರ್ ಅಭಿಮಾನಿಗಳಾಗಿದ್ದು ಅದಕ್ಕಾಗಿ ಹಾಗ್ವಾಟ್ರ್ಸ್ ಥೀಮ್ ಆಯ್ಕೆ ಮಾಡಿಕೊಂಡಿದ್ದರು. ಚೆನ್ನೈನಿಂದ ಮೆಟಾವರ್ಸ್‍ನಲ್ಲಿ ಸಂಗೀತ ಕಛೇರಿಯು ನಡೆಯಿತು. ದಂಪತಿಗಳಿಬ್ಬರು ಸಮಾನ ಆಸಕ್ತಿ ಹೊಂದಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ವರ್ಚುವಲ್ ವೇದಿಕೆಯಲ್ಲಿ ಅರತಕ್ಷತೆ ಆಯೋಜಿಸುವ ದಿನೇಶ್ ಅವರ ಆಸಕ್ತಿಗೆ ಪತ್ನಿ ಸಹಮತ ವ್ಯಕ್ತ ಪಡಿಸಿದ್ದಾರೆ. ಮೆಟಾವರ್ಸ್ ಅರತಕ್ಷತೆಗಾಗಿ ಟಾರ್ಡಿವರ್ಸ್ ಸಂಸ್ಥೆ 12 ಮಂದಿಯ ತಂಡ ಸುಮಾರು ಒಂದು ತಿಂಗಳಿನಿಂದ ತಂತ್ರಜ್ಞಾನ ಹಾಗೂ ವಿನ್ಯಾಗಳನ್ನು ರೂಪಿಸಿತ್ತು ಎಂದು ಸಿಇಒ ವಿನೇಶ್ ಸೆಲ್ವರಜ್ ತಿಳಿಸಿದ್ದಾರೆ.
ಮೆಟಾವರ್ಸ್ ಅರತಕ್ಷತೆ ಜನರ ಮೇಲೆ ಪ್ರಚಂಡ ಪ್ರಭಾವ ಬೀರಿದೆ. ದಿನೇಶ್ ಅವರ ಮದುವೆ ಕಾರ್ಯಕ್ರಮ ಯಶಸ್ವಿಯಾದ ಬಳಿಕ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ದೇಶಾದ್ಯಂತ 60 ಕಾರ್ಯಕ್ರಮಗಳಿಗೆ ಪ್ರಸ್ತಾವನೆ ಬಂದಿದೆ. ಜೊತೆ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಮೆಟಾವರ್ಸ್‍ನಲ್ಲಿ ಆಯೋಜಿಸಲು ಹಲವು ಮನವಿ ಸಲ್ಲಿಸಿದ್ದಾರೆ ಎಂದು ವಿಘ್ನೇಶ್ ಹೇಳಿದ್ದಾರೆ.
ಈ ವೇದಿಕೆಯಲ್ಲಿ ಪರಸ್ಪರ ಊಡುಗೊರೆಗಳನ್ನು ಹಂಚಿಕೊಳ್ಳಬಹುದು. ಸಂವಹನ ನಡೆಸಬಹುದಾದ, ಸಭೆಗಳನ್ನು ನಡೆಸಬಹುದಾದ, ಭೂಮಿಯನ್ನು ಖರೀದಿಸುವ, ಮಾರಾಟ ಮಾಡುವ ಪ್ರಕ್ರಿಯೆಯನ್ನು ನಡೆಸಬಹುದು. 3ಡಿ ದೃಶ್ಯಗಳ ಮೆಟಾವರ್ಸ್ ತಂತ್ರಜ್ಞಾ ದಿನೇ ದಿನೇ ಚಲನಶೀಲ ವೃದ್ಧಿ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
 

Articles You Might Like

Share This Article