ಇಡುಕ್ಕಿ,ಡಿ 24- ಪವಿತ್ರ ಶಬರಿಮಲೆ ಯಾತ್ರೆಯಿಂದ ವಾಪಸಾಗುತ್ತಿದ್ದ ವಾಹನ ಥೆಕ್ಕಡಿ-ಕಂಬಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿ ಎಂಟು ಮಂದಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ತಡ ರಾತ್ರಿ ವರದಿಯಾಗಿದೆ.
ತಮಿಳುನಾಡಿನ ಥೇಣಿ ಜಿಲ್ಲೆಯ ಆಂಡಿಪಟ್ಟಿಯ 10 ಮಂದಿ ವ್ಯಾನ್ನಲ್ಲಿ ಶಬರಿಮಲೆ ಯಾತ್ರೆಗೆ ತೆರಳಿದ್ದರು. ದರ್ಶನ ಮುಗಿಸಿಕೊಂಡು ವಾಪಾಸ್ ಬರುವಾಗ ನಿನ್ನೆ ರಾತ್ರಿ 10.30ರ ಸುಮಾರಿನಲ್ಲಿ ದಟ್ಟ ಮಂಜು ಕವಿದಿತ್ತು.
ತಮಿಳುನಾಡು -ಕೇರಳ ಗಡಿಯ ಕುಮ್ಲಿ-ಕ್ಯೂಂಬಮ್ ಗುಡ್ಡಗಾಡು ಮಾರ್ಗದಲ್ಲಿ ರಸ್ತೆ ಸರಿಯಾಗಿ ಗೋಚರಿಸಿಲ್ಲ. ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಅಂಚಿನ 40 ಅಡಿ ಕಂದಕಕ್ಕೆ ಬಿದ್ದಿದೆ. ಪೊಲೀಸರು, ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನಲ್ಲಿ ನೀರು ಸರಬರಾಜು ಪೈಪ್ಲೈನ್ ಮೇಲೆ ಬಿದ್ದದ್ದ ವ್ಯಾನ್ನಿಂದ ಸಂತ್ರಸ್ಥರನ್ನು ಹೊರ ತೆಗೆದಿದ್ದಾರೆ.
725 ಮಿಲಿಯನ್ ಡಾಲರ್ ಪಾವತಿಗೆ ಒಪ್ಪಿಕೊಂಡ ಫೆಸ್ಬುಕ್
ಅವರಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದರು ಎಂದು ಜಿಲ್ಲಾಧಿಕಾರಿ ಕೆ ವಿ ಮುರಳೀಧರನ್ ತಿಳಿಸಿದ್ದಾರೆ.
ಗಾಯಾಳುಗಳನ್ನು ಥೇಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಅಪ್ರಾಪ್ತ ಬಾಲಕನು ಸೇರಿದ್ದಾನೆ. ಕುಮ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
#TamilNadu, #SabarimalaPilgrims, #raodmishap, #Accident