ಬೆಂಗಳೂರು,ಜೂ.1- ಮೇಕೆದಾಟು ಯೋಜನೆ ಜಾರಿಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಎರಡು ರಾಜ್ಯಗಳು ಜಗಳವಾಡಿದ್ದು ಸಾಕು ಇನ್ನೂ ನೀರಿನ ವಿಷಯದಲ್ಲಿ ಪರಸ್ಪರ ಹೃದಯ ಶ್ರೀಮಂತಿಕೆಯಿಂದ ಸಹಕಾರ ನೀಡಬೇಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನೀರಿಗಾಗಿ ನಡೆದಿದ್ದೇವೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದಿದ್ದಾರೆ.
ನಮ್ಮ ಹೋರಾಟದ ಬಳಿಕ ನಮ್ಮ ರಾಜ್ಯದ ಹಿಂದಿನ ಮುಖ್ಯಮಂತ್ರಿಗಳು ಯೋಜನೆಗಾಗಿ ಒಂದು ಸಾವಿರ ಕೋಟಿ ಇಟ್ಟಿದ್ದಾರೆ. ಅದನ್ನು ಖರ್ಚು ಮಾಡಿಲ್ಲ. ನಮಗೆ ತಮಿಳುನಾಡಿನ ಮೇಲೆ ದ್ವೇಷವಿಲ್ಲ, ಯುದ್ಧ ಮಾಡಬೇಕಿದೆಂದನೂ ಇಲ್ಲ. ಅಲ್ಲಿರುವವರು ನಮ್ಮ ಅಣ್ಣತಮ್ಮಂದಿರು, ಅವರ ಅಣ್ಣತಮ್ಮಂದಿರು ಇಲ್ಲಿದ್ದಾರೆ.
ಮಂತ್ರಾಲಯಕ್ಕೆ ಒಂದೇ ತಿಂಗಳಿನಲ್ಲಿ 3.5 ಕೋಟಿ ಕಾಣಿಕೆ
ಸಮುದ್ರಕ್ಕೆ ಹರಿದು ಹೋಗುವ ನೀರನ್ನು ತಡೆ ಹಿಡಿದು ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದರು.
ನ್ಯಾಯಾಕರಣ ತೀರ್ಪಿನಲ್ಲಿ ನೀರಿನ ಹಂಚಿಕೆಯಾಗಿದೆ. ಅದರಂತೆ ಹರಿಯಬೀಡಬೇಕಿದೆ. ನಮ್ಮಲ್ಲಿ ವಿದ್ಯುತ್ ಉತ್ಪಾದನೆಯಿಂದ, ನೀರು ಸಂಗ್ರಹಿದಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ಹೃದಯ ಶ್ರೀಮಂತಿಕೆ ಪ್ರದರ್ಶನ ಮಾಡಿ, ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ. ಅಕ್ಕಪಕ್ಕದ ರಾಜ್ಯಗಳು, ಜಗಳ ಆಡಿದ್ದು ಸಾಕು ಎಂದು ಮನವಿ ಮಾಡಿದ್ದಾರೆ.
TamilNadu, #MekedatuDam, #DCM, #DKShivakumar,