ಚೆನ್ನೈ,ಡಿ.26- ಭವಿಷ್ಯದಲ್ಲಿ ಸಂಭವಿಸುವ ಚಂಡ ಮಾರುತಗಳ ಬಗ್ಗೆ ಎಚ್ಚರಿಕೆ ನೀಡುವ ಚಂಡಮಾರುತ ಎಚ್ಚರಿಕೆ ಕೇಜ್ಗಳನ್ನು ತಮಿಳುನಾಡಿನಲ್ಲಿ ಅಳವಡಿಸಲಾಗಿದೆ. ರಾಮೇಶ್ವರದ ಪಂಬನ್ ಬಂದರಿನಲ್ಲಿ ಚಂಡ ಮಾರುತ ಎಚ್ಚರಿಕೆ ಕೇಜ್ಗಳನ್ನು ಅಳವಡಿಸಲಾಗಿದ್ದು, ಇದು ಸಮುದ್ರ ಬದಲಾವಣೆ, ಗಾಳಿಯ ವೇಗ ಮತ್ತು ಚಂಡ ಮಾರುತಗಳ ಬಗ್ಗೆ ಎಚ್ಚರಿಕೆ ನೀಡಲಿದೆ.
ಇದರಿಂದ ಸಮುದ್ರಗಳಲ್ಲಿ ಪ್ರಾಣದ ಹಂಗು ತೊರೆದು ಮೀನು ಹಿಡಿಯುವ ಕಾಯಕ ಮಾಡುತ್ತಿರುವ ಮೀನುಗಾರರಿಗೆ ಉಪಯೋಗವಾಗಲಿದ್ದು, ಪರಿಸ್ಥಿತಿ ತಿಳಿದುಕೊಂಡು ಅವರು ನೀರಿಗಿಳಿಯುವುದರಿಂದ ಅಪಾಯದಿಂದ ಪಾರಾಗಬಹುದಾಗಿದೆ.
ಚಂಡಮಾರುತ ಎಚ್ಚರಿಕೆ ಕೇಜ್ ನೀಡಿದ ರೆಡ್ ಅಲರ್ಟ್ ಮಾಹಿತಿ ಮೇರೆಗೆ ಪಂಬನ್ ಬಂದರಿನ ಸಮೀಪದ ರೈಲು ಹಳಿಗಳ ಮೇಲಿನ ರೈಲು ಹೋಗುವುದನ್ನು ಬುಧವಾರದವರೆಗೆ ನಿಷೇಸಲಾಗಿದೆ.
Tamil Nadu, Storm Warning, Cage, 3 mounted, Pamban port,