ಉಕ್ರೇನ್ ಸೇನೆ ಸೇರಿದ ತಮಿಳುನಾಡಿನ ವಿದ್ಯಾರ್ಥಿ

Social Share

ನವದೆಹಲಿ, ಮಾ.8-ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷದ ಸಾಯಿನಿಕೇಶ್ ರವಿಚಂದ್ರನ್ ಎಂಬ ವಿದ್ಯಾರ್ಥಿ ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್ನಲ್ಲಿ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿದ್ದಾನೆ. ರವಿಚಂದ್ರನ್ ಸ್ವಯಂಸೇವಕರನ್ನು ಒಳಗೊಂಡಿರುವ ಜಾರ್ಜಿಯನ್ ನ್ಯಾಷನಲ್ ಲೀಜನ್ ಅರೆಸೇನಾ ಘಟಕದ ಭಾಗವಾಗಿ ಉಕ್ರೇನಿಯನ್ ಪಡೆಗಳಿಗೆ ಸೇರ್ಪಡೆಗೊಂಡಿದ್ದಾರೆ ಎಂದು ತಮಿಳುನಾಡು ಸರ್ಕಾರ ಕೇಂದ್ರಕ್ಕೆ ತಿಳಿಸಿದೆ.
ಅವರು 2018 ರಲ್ಲಿ ಉಕ್ರೇನ್ ನ ಖಾರ್ಕಿವ್ನಲ್ಲಿರುವ ನ್ಯಾಷನಲ್ ಏರೋಸ್ಪೇಸ್ ಯೂನಿವರ್ಸಿಟಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಕೋರ್ಸ್ ಅನ್ನು ಅಧ್ಯಯನ ಮಾಡಲು ತೆಳಲಿದ್ದ. ರವಿಚಂದ್ರನ್ ಈ ಮೊದಲು ಭಾರತೀಯ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದರು ಆದರೆ ತಿರಸ್ಕರಿಸಲಾಯಿತು ಎಂದು ಹೇಳಲಾಗಿದೆ.
ರಷ್ಯಾ-ಉಕ್ರೇನ್ ಸಂಘರ್ಷದ ನಡುವೆ, ಸಾಯಿಕೇಶ್ ಅವರ ಕುಟುಂಬವು ಅವರೊಂದಿಗೆ ಸಂವಹನವನ್ನು ಕಳೆದುಕೊಂಡಿತು. ನಂತರ ಅವರ ಕುಟುಂಬಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ ನಂತರ 21 ವರ್ಷದ ಯುವಕ ಸಾಯಿನಿಕೇಶ್ ರವಿಚಂದ್ರನ್ ರಷ್ಯಾದ ಆಕ್ರಮಣ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೈನಿಕ ಪಡೆಗಳನ್ನು ಸೇರಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

Articles You Might Like

Share This Article