ತಮಿಳುನಾಡಿನಲ್ಲಿ ಮತ್ತಿಬ್ಬರು ವಿದ್ಯಾರ್ಥಿನಿಯರ ಆತ್ಮಹತ್ಯೆ

Social Share

ಚೆನ್ನೈ, ಜು.26 – ತಮಿಳು ನಾಡಿನಲ್ಲಿ ವಿಧ್ಯಾರ್ಥಿಗಳ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಸೋಮವಾರ ಇಬ್ಬರು ವಿದ್ಯಾರ್ಥಿನೀಯರು ಜೀವ ಕಳೆದುಕೊಂಡಿದ್ದಾರೆ. ತಿರುವಳ್ಳೂರು ಜಿಲ್ಲಾಯಲ್ಲಿ 12 ನೇ ತರಗತಿ ವಿದ್ಯಾರ್ಥಿನಿ ತನ್ನ ಶಾಲಾ ಹಾಸ್ಟೆಲ್ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಲ್ಲುಪುರಂ ಜಿಲ್ಲಾಯ ವಿಕ್ರವಾಂಡಿಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಬಿ ಫಾರ್ಮ ಓದುತ್ತಿದ್ದ ಮೊದಲ ವರ್ಷದ ವಿದ್ಯಾರ್ಥಿನಿ ತನ್ನ ಕಾಲೇಜಿನ ಮೊದಲ ಮಹಡಿಯಿಂದ
ಕೆಳಗೆ ಹಾರಿ ಜೀವಬಿಟ್ಟುದ್ದಾರೆ.

ಕಳೆದ ಜುಲೈ 17 ರಂದು ಕಲ್ಲಕುರಿಚಿ ಜಿಲ್ಲಾಯಲ್ಲಿ ವಿದ್ಯಾರ್ಥಿನಿಯೊಬ್ಬಳ ಸಾವಿನ ನಂತರ ನಡೆದ ಹಿಂಸಾಚಾರದ ನಂತರ ಮತೆ ಇಂತಹ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದೆ. ಎರಡು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ ಮೃತ ಬಾಲಕಿಯ ಸಂಬಂಧಿಕರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.

ಶಾಲೆಗಳು, ಕಾಲೇಜುಗಳು ಅಥವಾ ಪೋಷಕರು ಸೇರಿದಂತೆ ಎಲ್ಲಾ ಪಾಲುದಾರರು ಆತ್ಮಹತ್ಯೆ ಪ್ರವೃತ್ತಿಯ ಮೇಲೆ ನಿಗಾ ಇಡಬೇಕು ಮತ್ತು ಅದನ್ನು ತಡೆಗಟ್ಟಲು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಜ್ಯ ಮಾನಸಿಕ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಡಾ.ಪಿ.ಪೂರ್ಣಚಂದ್ರಿಕಾ,ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಬೇಕು ಮತ್ತು ಅವರು ಎದುರಿಸಬಹುದಾದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಲಭ್ಯವಿದೆ ಎಂದು ಅವರಿಗೆ ತಿಳಿಸಬೇಕು. ಮಕ್ಕಳಲ್ಲಿ ಸಕಾರಾತ್ಮಕ ಮಾನಸಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಹಲವಾರು ಕ್ರಮಗಳನ್ನು ಜಾರಿಗೊಳಿಸುತ್ತಿದೆ ಇದಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ಅವರು ಹೇಳಿದರು.

Articles You Might Like

Share This Article