ಚೆನ್ನೈ,ಆ.18- ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಮೇಲೆ ಮಹಿಳೆಯೊಬ್ಬಳು ಪತಿಯ ಮರ್ಮಾಂಗಕ್ಕೆ ಬಿಸಿ ನೀರು ಸುರಿದಿರುವ ಪೈಶಾಚಿಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪತ್ನಿಯ ಪೈಶಾಚಿಕ ಕೃತ್ಯದಿಂದ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ತಮಿಳುನಾಡಿನ ಪುದುಪಟ್ಟು ನಿವಾಸಿ ತಂಗರಾಜ್ ಎಂದು ಗುರುತಿಸಲಾಗಿದೆ.
ಬಿಸಿನೀರಿನಿಂದ ಆತನ ದೇಹ ಶೇ.50 ರಷ್ಟು ಸುಟ್ಟು ಹೋಗಿದ್ದು, ಸ್ಥಳೀಯರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿರುವುದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ತಂಗರಾಜು ಏಳು ವರ್ಷದ ಹಿಂದೆ ಪ್ರಿಯ ಎಂಬುವರನ್ನು ವಿವಾಹವಾಗಿದ್ದ, ಪತಿಯ ನಡತೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಪತ್ನಿ ದಿನನಿತ್ಯ ಆತನೊಂದಿಗೆ ಜಗಳವಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ತಂಗರಾಜು ಕೆಲಸ ಮಾಡುವ ಸಂಸ್ಥೆಯಲ್ಲಿ ಆತ ಮಹಿಳೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಪ್ರಿಯಳನ್ನು ಕಾಡುತಿತ್ತು. ಇದೇ ವಿಚಾರದಲ್ಲಿ ಇಬ್ಬರ ನಡುವೆ ಮಾರಾಮಾರಿ ನಡೆದಿತ್ತು. ಗಲಾಟೆ ತಣ್ಣಗಾದ ಮೇಲೆ ನಿದ್ರೆಗೆ ಜಾರಿದ್ದ ತಂಗರಾಜು ಮರ್ಮಾಂಗದ ಮೇಲೆ ಪ್ರಿಯ ಕುದಿಯುತ್ತಿದ್ದ ಬಿಸಿ ನೀರು ತಂದು ಸುರಿದಿದ್ದಾಳೆ.
ಘಟನೆಯಿಂದಾಗಿ ಆತನ ಮರ್ಮಾಂಗ ಶೇ.50 ರಷ್ಟು ಸುಟ್ಟು ಹೋಗಿದ್ದು ಅಕ್ಕಪಕ್ಕದವರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಕಾವೇರಿಪಾಕಂ ಪೊಲೀಸರು ತಿಳಿಸಿದ್ದಾರೆ.
ಪೈಶಾಚಿಕ ಕೃತ್ಯ ನಡೆಸಿರುವ ಪ್ರಿಯಳನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.