ಅಪಾಯಕಾರಿ ರಾಸಾಯನಿಕವನ್ನು ನದಿಗೆ ಸುರಿಯುತ್ತಿದ್ದ ಟ್ಯಾಂಕರ್ ಚಾಲಕನ ಬಂಧನ

Social Share

ಥಾಣೆ, ನ.7 -ಮಹಾರಾಷ್ಟ್ರದ ಥಾಣೆ ಜಿಲ್ಲಾಯ ವಾಲ್ಧುನಿ ನದಿಗೆ ಅಪಾಯಕಾರಿ ರಾಸಾಯನಿಕ ದ್ರಾವಣವನ್ನು ಸುರಿಯುತ್ತಿದ್ದ ಟ್ಯಾಂಕರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ವಿವಿಧ ಕಾರ್ಖಾನೆಗಳಿಂದ ಸಂಗ್ರಹಿಸಿದ ವಿಷಕಾರಿ ರಾಸಾಯನಿಕವನ್ನು ನದಿಗೆ ಸುರಿಯಲಾಗುತ್ತದೆ ಎಂಬ ಮಾಹಿತಿ ಪಡೆದ ಪೊಲೀಸರು ದಾಲಿ ನಡೆಸಿ ಟ್ಯಾಂಕರ್‍ನ ಚಾಲಕ ನನ್ನು ಬಂಧಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಮತ್ತು ಪರಿಸರ (ರಕ್ಷಣೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಮಹಾತ್ಮ ಫುಲೆ ಚೌಕ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(07-11-2022)

ಇದೊಂದು ಅಪಾಯಕಾರಿ ಘಟನೆ ಇದರಿಂದ ನದಿ ಕಲುಷಿತಗೊಳುವ ಜೊತೆಗೆ ಜಲಚರ ಹಾಗು ಮಾನವರಿಗೂ ಹಾನಿಕಾರ ಪರಿಸರ ಸಂರಕ್ಷಣೆಗೆ ಮಾರಕ ಇಂತಹ ಘಟನೆ ನಡೆಯದಂತೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Articles You Might Like

Share This Article