Wednesday, May 31, 2023
Homeಇದೀಗ ಬಂದ ಸುದ್ದಿಕೈತಪ್ಪಿದ ಸಚಿವ ಸ್ಥಾನ : ತನ್ವೀರ್ ಸೇಠ್ ಅಸಮಾಧಾನ, ಬೆಂಬಲಿಗರ ಆಕ್ರೋಶ

ಕೈತಪ್ಪಿದ ಸಚಿವ ಸ್ಥಾನ : ತನ್ವೀರ್ ಸೇಠ್ ಅಸಮಾಧಾನ, ಬೆಂಬಲಿಗರ ಆಕ್ರೋಶ

- Advertisement -

ಮೈಸೂರು, ಮೇ 27- ಆರು ಬಾರಿ ಶಾಸಕರಾಗಿದ್ದರೂ ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಹಿರಿಯ ಶಾಸಕ ತನ್ವೀರ್ ಸೇಠ್ ಅಸಮಾಧಾನ ಹೊರಹಾಕಿದ್ದಾರೆ. ಮೈಸೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹಗಲಿರುಳು ದುಡಿದಿದ್ದೇನೆ. ಅಲ್ಪಸಂಖ್ಯಾತ ಸಮುದಾಯದ ದನಿಯಾಗಿ ಕೆಲಸ ಮಾಡಿದ್ದೇನೆ.

ಕಾಂಗ್ರೆಸ್ ಅಕಾರಕ್ಕೆ ಬರುವ ಸಲುವಾಗಿ ನಾನು ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಶಕ್ತಿ ಮೀರಿ ಪ್ರಯತ್ನಿಸಿದ್ದೆ. ಆದರೆ, ಅದಕ್ಕೆ ಫಲ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ಬೆಂಬಲಿಗರು ಕೂಡ ಈಗ ಸ್ವಾಭಾವಿಕವಾಗಿ ನೊಂದಿದ್ದಾರೆ. ಏಕೆ ನನಗೆ ಸಚಿವ ಸ್ಥಾನ ನೀಡಿಲ್ಲ ಎಂಬುದು ಅರ್ಥವಾಗುತ್ತಿಲ್ಲ.

ನೂತನ ಸಚಿವರಿಗೆ ಖಾತೆ ಹಂಚಿಕೆ, ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಇದರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ.ಆದರೆ ನೋವಾಗಿರುವುದಂತೂ ನಿಜ. ಮುಂದಿನ ದಿನಗಳಲ್ಲಿ ನಾನು ಯಾವ ರೀತಿ ಜನರ ಮುಂದೆ ಹೋಗಬೇಕು ಎಂಬುದು ಗೊತ್ತಾಗುತ್ತಿಲ್ಲ. ಎಲ್ಲರ ಭಾವನೆಗಳು ಮತ್ತು ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅವರು ತಿಳಿಸಿದರು.

ಇದೇ ವೇಳೆ ಮೈಸೂರು ನಗರ ಸೇರಿದಂತೆ ಹಲವು ಭಾಗಗಳಲ್ಲಿ ತನ್ವೀರ್ ಸೇಠ್ ಬೆಂಬಲಿಗರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

#TanveerSait,

- Advertisement -
RELATED ARTICLES
- Advertisment -

Most Popular