ಫೋನ್ ಕದ್ದಾಲಿಕೆ ತನಿಖೆಗೆ ತನ್ವೀರ್ ಸೇಠ್ ಆಗ್ರಹ

ಮೈಸೂರು, ಆ.15- ಟೆಲಿಫೋನ್ ಕದ್ದಾಲಿಕೆ ಯಾರೇ ಮಾಡಿದರು. ಅದು ಮಹಾಅಪರಾಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಮಾಜಿ ಸಚಿವ ತನ್ವೀರ್ ಸೇಠ್ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರವಿರಲಿ, ಯಾವುದೇ ಸರ್ಕಾರವಿರಲಿ ಟೆಲಿಫೆಫೋನ್ ಕದ್ದಾಲಿಕೆ ಯಾರೇ ಮಾಡಿದ್ದರು ಅದು ಅಪರಾಧವಾಗುತ್ತದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಾಮಾನ್ಯವಾಗಿ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತದೆ. ಆದರೆ ಜನಪ್ರತಿನಿಧಿಗಳ ಫೋನ್ ಕದ್ದಾಲಿಕೆ ಮಾಡಿರುವುದು ತಪ್ಪಾಗುತ್ತದೆ. ಅದು ಯಾರೇ ಮಾಡಿರಲಿ ಅವರ ವಿರುದ್ಧ ಕಾನೂನು ಜರುಗಿಸಬೇಕೆಂದು ಹೇಳಿದರು.