ಗುಜರಾತ್ ಪಾಲಾದ ಬಹುಕೋಟಿ ಏರ್ ಬಸ್ ಯೋಜನೆ

Social Share

ಮುಂಬೈ,ಅ.28- ಬಹುಕೋಟಿ ಟಾಟಾ ಏರ್ ಬಸ್ ಯೋಜನೆ ಮಹಾರಾಷ್ಟ್ರದಿಂದ ಗುಜರಾತ್ ಪಾಲಾಗಲು ಕಾರಣವೇನು ಎಂದು ಪ್ರಶ್ನಿಸಿರುವ ಮಾಜಿ ಸಚಿವ ಆದಿತ್ಯ ಠಾಕ್ರೆ ಇದರ ಹಿಂದೆ ಸಿಎಂ ಶಿಂಧೆ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

22000 ಕೋಟಿ ರೂಪಾಯಿ ಟಾಟಾ- ಏರ್ ಬಸ್ ಸಿ-295 ಸಾರಿಗೆ ವಿಮಾನ ಸೌಲಭ್ಯ ಯೋಜನೆ ಗುಜರಾತ್ ಪಾಲಾಗಲು ಶಿಂಧೆ ಅವರೇ ಕಾರಣ, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಸಿಎಂ ವಿಫಲರಾಗಿದ್ದಾರೆ ಎಂದು ಅವರು ಟೀಕಿಸಿದರು.

ಏರ್ ಬಸ್ ಮತ್ತು ಟಾಟಾ ಸಮೂಹದ ಒಕ್ಕೂಟವು ಗುಜರಾತ್‍ನ ವಡೋದರಾದಲ್ಲಿ ಭಾರತೀಯ
ವಾಯುಪಡೆಗೆ ಇ-295 ಸಾರಿಗೆ ವಿಮಾನವನ್ನು ತಯಾರಿಸಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿತ್ತು.

ಗಂಧದಗುಡಿ ಕಣ್ತುಂಬಿಕೊಂಡು ‘ಪುನೀತ’ರಾದ ಅಭಿಮಾನಿಗಳು, ಅಪ್ಪು ಕನಸಿನ ಚಿತ್ರಕ್ಕೆ ಗ್ರಾಂಡ್ ಓಪನಿಂಗ್

ಅದರೆ, ಈ ಹಿಂದೆ ಮಹಾರಾಷ್ಟ್ರ ಕೈಗಾರಿಕಾ ಸಚಿವ ಉದಯ್ ಸಾಮಂತ್ ಅವರು, ಟಾಟಾ- ಏರ್ ಬಸ್ ವಿಮಾನ ತಯಾರಿಕಾ ಯೋಜನೆ ಮಹಾರಾಷ್ಟ್ರದ ವಿದರ್ಭ ಪ್ರದೇಶದ ನಾಗ್ಪುರ ಬಳಿ ಬರಲಿದೆ ಎಂದು ಹೇಳಿದ್ದರು.
ಈ ವ್ಯತಿರಿಕ್ತ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಠಾಕ್ರೆ ಬಹುಕೋಟಿ ಯೋಜನೆ ಗುಜರಾತ್ ಪಾಲಾಗಲು ಮಹಾರಾಷ್ಟ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಶ್ವದೆಲ್ಲೆಡೆ ಕೋಟಿ ಕಂಠಗಳಲ್ಲಿ ಮೊಳಗಿದ ಕನ್ನಡ ಗಾಯನ

ದೇಶದ್ರೋಹಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಾರಾಷ್ಟ್ರದಿಂದ ದೂರವಾಗುತ್ತಿರುವ ನಾಲ್ಕನೇ ಯೋಜನೆ ಇದಾಗಿದೆ. ಅವರು ಯಾವಾಗಲೂ ತಮ್ಮ ಬಳಿ ಡಬಲ್ ಇಂಜಿನ್ ಸರ್ಕಾರವಿದೆ ಎಂದು ಹೆಮ್ಮೆಪಡುತ್ತಾರೆ, ಆದರೆ ಕೇಂದ್ರ ಸರ್ಕಾರದ ಒಂದು ಎಂಜಿನ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರದ ಎಂಜಿನ್ ವಿಫಲವಾಗಿದೆ ಎಂದು ದೂರಿದ್ದಾರೆ.

Articles You Might Like

Share This Article