ಭಾರತದ ಫೋರ್ಡ್ ಕಂಪನಿಯನ್ನು ಖರೀದಿಸಿದ ಟಾಟಾ ಸಂಸ್ಥೆ

Social Share

ನವದೆಹಲಿ, ಆ. 8- ಆಟೋ ಮೊಬೈಲ್ ದಿಗ್ಗಜ ಸಂಸ್ಥೆ ಟಾಟಾ ಮೋಟರ್ಸ್ ಈಗ ಭಾರತದಲ್ಲಿನ ಅಮೆರಿಕ ಮೂಲದ ಫೋರ್ಡ್ ಕಂಪೆನಿಯ ಸ್ವತ್ತನ್ನು ಖರೀದಿಸಲು ಮುಂದಾಗಿದೆ. ಭಾರತದಲ್ಲಿರುವ ಕಾರ್ಖಾನೆಗಳು, ಉಪಕರಣಗಳು ಹಾಗೂ ಸಿಬ್ಬಂದಿಗಳನ್ನು ಟಾಟಾ ಸಮೂಹ ಸಂಪೂರ್ಣವಾಗಿ ಸುಮಾರು 7.26 ಬಿಲಿಯನ್ ರೂ.ಗಳಿಗೆ ಖರೀದಿಸುವ ಪ್ರಕ್ರಿಯೆ ನಡೆದಿದೆ.

ಈಗಾಗಲೇ ಜಾಗ್ವರ್, ಲ್ಯಾಂಡ್ ರೋವರ್‍ನ್ನು ಸ್ವಾೀಧಿನಪಡಿಸಿ ಕೊಂಡಿರುವ ಟಾಟಾ ಜಾಗತಿಕವಾಗಿ ತನ್ನ ಪ್ರಮುಖ್ಯತೆಯನ್ನು ಹೆಚ್ಚಿಸಿ ಕೊಳ್ಳುವ ನಿಟ್ಟಿನಲ್ಲಿ ಭಾರತದಲ್ಲಿನ ಫೋರ್ಡ್ ಕಂಪೆನಿಯ ಸ್ವತ್ತನ್ನು ತನ್ನ ವ್ಯಾಪ್ತಿಗೆ ವಿಲೀನಗೊಳಿಸಿಕೊಳ್ಳುತ್ತಿದೆ.

ಗುಜರಾತ್‍ನ ಪಶ್ಚಿಮ ಭಾಗದಲ್ಲಿರುವ ಫೋರ್ಡ್ ಕಾರ್ಖಾನೆ ಸದ್ಯದಲ್ಲಿಯೇ ಟಾಟಾ ಕೈಸೇರಲಿದೆ. ಕಳೆದ ವರ್ಷ ಭಾರತದಲ್ಲಿ ಫೋರ್ಡ್ ಕಂಪೆನಿ ತನ್ನ ಕಾರು ತಯಾರಿಕೆ ಘಟಕವನ್ನು ಮುಚ್ಚಿರುವ ಕಾರಣ ಅದರ ವ್ಯಾಪ್ತಿಯನ್ನು ಬಳಸಿಕೊಂಡು ಬೇಡಿಕೆಗನುಗುಣವಾಗಿ ಹೆಚ್ಚಿನ ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದೇವೆ ಎಂದು ಟಾಟಾ ಮೋಟರ್ಸ್‍ನ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 4000 ನೌಕರರು ಫೋರ್ಡ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 10 ವರ್ಷಗಳಲ್ಲಿ ಸುಮಾರು 2 ಬಿಲಿಯನ್ ಡಾಲರ್ ನಷ್ಟ ಅನುಭವಿಸಲಾಗಿತ್ತು ಎಂದು ಫೋರ್ಡ್ ಕಂಪೆನಿ ಹೇಳಿಕೊಂಡಿದೆ.

Articles You Might Like

Share This Article