ತೆರಿಗೆ, ಬೆಲೆ ಏರಿಕೆ ಹೆಸರಲ್ಲಿ ಹಣ ಲೂಟಿ : ಸಿದ್ದರಾಮಯ್ಯ

Social Share

ಬೆಂಗಳೂರು,ಮಾ.6- ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜನರಿಂದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿ ಇತರ ಬೆಲೆ ಏರಿಕೆಯಿಂದ ಲೂಟಿ ಮಾಡಿದ ಹಣದಲ್ಲಿ ಎಷ್ಟು ವಾಪಾಸ್ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಬಹಿರಂಗ ಪತ್ರ ಬರೆದಿರುವ ಅವರು, ಬಿಜೆಪಿಯು ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸುತ್ತಿದೆ. ಯಾತ್ರೆ ನಡೆಸುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಯಾವ ಮುಖವನ್ನು ಹೊತ್ತುಕೊಂಡು ವಿಜಯ ಸಂಕಲ್ಪ ಯಾತ್ರೆ ಹೊರಟಿದೆ ಎಂದು ರಾಜ್ಯದ ಜನರಿಗೆ ತಿಳಿಸಬೇಕಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆ.ಪಿ ನಡ್ಡಾ ಹಾಗೂ ರಾಜ್ಯದ ಬಿಜೆಪಿಗರೆಲ್ಲ ಸೇರಿಕೊಂಡು ಮಾಡುತ್ತಿರುವ ಯಾತ್ರೆಗೆ 40 ಪರ್ಸೆಂಟ್ ಸಂಕಲ್ಪ ಯಾತ್ರೆ ಎಂದು ಹೆಸರಿಟ್ಟರೆ ಸಾರ್ಥಕವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ಸದಸ್ಯತ್ವದಿಂದಲೇ ಮಾಡಾಳ್ ವಿರೂಪಾಕ್ಷಪ್ಪ ಉಚ್ಛಾಟನೆ..?

ಸುಳ್ಳು ಉತ್ಪಾದಿಸಿ ಹಂಚುವ ಯಾತ್ರೆ, ಜನರ ಶೋಷಣೆಗೆ, ಹಿಂಸೆಗೆ, ದ್ವೇಷಕ್ಕೆ, ಬೆಲೆ ಏರಿಕೆಗೆ ಮತ್ತು ಕರ್ನಾಟಕದ ಚೈತನ್ಯವನ್ನೆ ನಾಶ ಮಾಡುವುದಕ್ಕಾಗಿ ಮಾಡುತ್ತಿರುವ ಯಾತ್ರೆ ಎಂದು ಹೆಸರಿಟ್ಟುಕೊಂಡಿದ್ದರೆ ಮಾತ್ರ ಅದಕ್ಕೊಂದು ಅರ್ಥವಿರುತ್ತಿತ್ತು. ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದಲೂ ಜನ ದ್ರೋಹವನ್ನು ಬಿಟ್ಟು ಬೇರೇನು ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿ ಸರ್ಕಾರಗಳು ಒಂದೆ ಒಂದು ಜನಪರವಾದ ಯೋಜನೆ ಜಾರಿಗೆ ತಂದಿದೆಯೆ? ಹೋಗಲಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಆಶ್ವಾಸನೆಗಳಲ್ಲಿ ಶೇ.10 ರಷ್ಟನ್ನಾದರೂ ಈಡೇರಿಸಿದೆಯೆ? ತಮ್ಮ ಬಜೆಟ್ ಭಾಷಣಗಳಲ್ಲಿ ಸದನದಲ್ಲಿ ಹೇಳಿರುವ ಎಲ್ಲ ಕಾರ್ಯಕ್ರಮಗಳನ್ನಾದರೂ ಈಡೇರಿಸಿದೆಯೆ? ಯಾವುದೂ ಇಲ್ಲ. ಆದರೂ ಯಾತ್ರೆ ಮಾಡಿಕೊಂಡು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

H3N2 ವೈರಸ್ ಬಗ್ಗೆ ಅನಗತ್ಯ ವದಂತಿ ಹಬ್ಬಿಸಬೇಡಿ : ಸಚಿವ ಸುಧಾಕರ್

ಕಿಸಾನ್ ಸಮ್ಮಾನ್ ಯೋಜನೆಯಲ್ಲೂ ಟೋಪಿ ಹಾಕಿದರು: ಪ್ರಧಾನಮಂತ್ರಿಯವರಾದಿಯಾಗಿ ಬಹುತೇಕ ಬಿಜೆಪಿಗರು ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ಹೋದ ಕಡೆಯಲ್ಲೆಲ್ಲ ಭಾಷಣ ಮಾಡುತ್ತಾರೆ. ಈ ಯೋಜನೆಯ ವಾಸ್ತವಾಂಶವೇನು? ನಮ್ಮ ರಾಜ್ಯದಲ್ಲಿ ಸುಮಾರು 1.40 ಕೋಟಿ ಕುಟುಂಬಗಳಿವೆ.

ಇವುಗಳಲ್ಲಿ 87 ಕೃಷಿ ಹಿಡುವಳಿಗಳಿವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಸುಮಾರು 45-47 ಲಕ್ಷ ಕೃಷಿ ಹಿಡುವಳಿದಾರರಿಗೆ ಕೇಂದ್ರ ಸರ್ಕಾರವು ವರ್ಷಕ್ಕೆ 6 ಸಾವಿರ ರೂಪಾಯಿ ಕೊಡುತ್ತಿದೆ ಮತ್ತು ರಾಜ್ಯ ಸರ್ಕಾರ 4 ಸಾವಿರ ರೂಪಾಯಿ ಕೊಡುತ್ತಿದೆ ಎಂದು ಹೇಳಿಕೊಳ್ಳುತ್ತಿವೆ. ಆದರೆ ರಾಜ್ಯ ಸರ್ಕಾರ ಕೊಡುತ್ತಿರುವುದು ಕೇವಲ 2 ಸಾವಿರ ರೂಪಾಯಿ ಮಾತ್ರ. ಕೇಂದ್ರ ಸರ್ಕಾರವೂ ಸಹ ಹೇಳಿದಷ್ಟನ್ನು ಕೊಡದೆ ಯಾಮಾರಿಸುತ್ತಿದೆ ಎಂದು ಅನೇಕ ರೈತರು ನನ್ನ ಬಳಿ ದೂರಿದ್ದಾರೆ ಎಂದಿದ್ದಾರೆ.

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ 45 ಲಕ್ಷ ರೈತರಿಗೆ 8 ಸಾವಿರವಾದರೂ ಸಿಗುತ್ತಿದೆ ಎಂದುಕೊಂಡರೂ ಬಿಜೆಪಿ ಸರ್ಕಾರಗಳ ಸುಲಿಗೆ ಯಾವ ಪ್ರಮಾಣದಲ್ಲಿ ಹೆಚ್ಚಾಗಿದೆಯೆಂದರೆ, ಜನರು ಪೂರ್ಣ ಮಟ್ಟದಲ್ಲಿ ಬರಿಗೈಯಾಗುತ್ತಿದ್ದಾರೆ. ಸಾಧಾರಣವಾಗಿ ಪ್ರತಿ ಮನೆಯಲ್ಲಿ ತಿಂಗಳಿಗೆ ಒಂದು ಅಡುಗೆ ಸಿಲಿಂಡರ್ ಬಳಸಲಾಗುತ್ತದೆ.

2014 ರಲ್ಲಿ ಅಡುಗೆ ಗ್ಯಾಸಿಗಾಗಿ ಜನರು ವರ್ಷಕ್ಕೆ ಸುಮಾರು 4800 ರೂ ಖರ್ಚು ಮಾಡುತ್ತಿದ್ದರು. ಆದರೆ ಈಗ 13500 ಯಿಂದ 14000 ರೂಪಾಯಿಗಳನ್ನು ಕೇವಲ ಅಡುಗೆ ಗ್ಯಾಸಿನ ಸಿಲಿಂಡರ್‍ಗಾಗಿಯೆ ಖರ್ಚುಮಾಡುವ ಗ್ರಹಚಾರ ಬಂದೊದಗಿದೆ. ಜನರಿಂದ ಸುಲಿಗೆ ಮಾಡುತ್ತಿರುವ ಈ ಹೆಚ್ಚುವರಿ 9000 ರೂಪಾಯಿಗಳಲ್ಲಿ ಜನರಿಗೆ ಎಷ್ಟು ಹಣವನ್ನು ವಾಪಸ್ಸು ಕೊಟ್ಟಿದ್ದೀರಿ ಹೇಳಿ? ಎಂದು ಪ್ರಶ್ನಿಸಿದ್ದಾರೆ.

ಸಾಧಾರಣವಾಗಿ 4 ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಲು ಟ್ರ್ಯಾಕ್ಟರ್ ಮತ್ತು ಬೆಳೆ ಕೊಯಿಲಿನ ಯಂತ್ರಕ್ಕೆ ಎಕರೆಗೆ 45 ಲೀಟರ್‍ನಂತೆ 4 ಎಕರೆಗೆ 180 ಲೀಟರ್ ಡೀಸೆಲ್ ಅಗತ್ಯವಿದೆ. 2014 ಕ್ಕೂ ಮೊದಲು ಪ್ರತಿ ಲೀಟರ್ ಡೀಸೆಲ್ ಬೆಲೆ 47 ರೂಗಿಂತ ಕಡಿಮೆ ಇತ್ತು. ಆಗ 8460 ರೂಗಳನ್ನು ಡೀಸೆಲ್‍ಗಾಗಿ ಸಣ್ಣ ರೈತನೊಬ್ಬ ಖರ್ಚು ಮಾಡುತ್ತಿದ್ದ. ಈಗ ಅಷ್ಟೆ ಭೂಮಿಗೆ 17100 ರೂಗಳನ್ನು ಖರ್ಚು ಮಾಡಬೇಕಾಗಿದೆ.

ಹೆಚ್ಚುವರಿಯಾಗಿ 8640 ರೂ ಖರ್ಚು ಒಬ್ಬ ಸಣ್ಣ ರೈತರಿಗೆ ಬಂದೊದಗಿದೆ. ಅಂದರೆ ಎರಡು ಪಟ್ಟಿಗಿಂತ ಹೆಚ್ಚು. ಪೇಟೆಗೆ ಹೋಗಿ ಕೂಲಿ ಕೆಲಸ ಮಾಡುವ ಕಾರ್ಮಿಕನೊಬ್ಬ ಸರಾಸರಿ ದಿನಕ್ಕೊಂದು ಲೀಟರ್ ಪೆಟ್ರೋಲ್ ಹಾಗೂ ವರ್ಷಕ್ಕೆ 300 ಲೀಟರ್ ಬಳಸುತ್ತಾನೆ ಎಂದುಕೊಂಡರೆ 2014 ರಲ್ಲಿ ಲೀಟರಿಗೆ 70 ರೂಪಾಯಿಗಳಂತೆ 21000 ರೂ ಖರ್ಚು ಮಾಡುತ್ತಿದ್ದರೆ ಈಗ 31000 ರೂಪಾಯಿ ಖರ್ಚು ಮಾಡುತ್ತಿದ್ದಾನೆ. ಇಲ್ಲಿ ಪ್ರತಿಯೊಬ್ಬನಿಂದ ಸುಲಿಗೆ ಮಾಡುತ್ತಿರುವ 10000 ಹೆಚ್ಚುವರಿ ರೂಪಾಯಿಗಳಲ್ಲಿ ಬಡವರಿಗೆ ವಾಪಾಸ್ ಏನು ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ತಿಂಗಳಿಗೆ ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ತೊಗರಿಬೇಳೆಗೆ 2014ರಲ್ಲಿ 150 ರೂ ಲೆಕ್ಕದಲ್ಲಿ ವರ್ಷಕ್ಕೆ 1800 ರೂಪಾಯಿ ಖರ್ಚಾಗುತ್ತಿತ್ತು. ಈಗಿದು 3750 ರೂಪಾಯಿ ಆಗಿದೆ. ಈ ಸುಲಿಗೆಗೆ ಏನು ಉತ್ತರ ಕೊಡುತ್ತೀರಿ? ಹಸು ಎಮ್ಮೆಗಳನ್ನು ಸಾಕುವ ರೈತರು 2017 ರಲ್ಲಿ ಎರಡು ಮೂಟೆ ಬೂಸಾ ಮತ್ತು ಎರಡು ಮೂಟೆ ಹಿಂಡಿ ಖರೀದಿಸಲು ತಿಂಗಳಿಗೆ 1600 ರೂಗಳಂತೆ ವರ್ಷಕ್ಕೆ 19200 ರೂಪಾಯಿ ಖರ್ಚು ಮಾಡುತ್ತಿದ್ದರು. ಈಗ 68000 ರೂಪಾಯಿ ಆಗಿದೆ.

ರೈತರಿಂದ ಸುಲಿಯುತ್ತಿರುವ ಹೆಚ್ಚುವರಿ 49000 ರಿಂದ 50000 ರೂಪಾಯಿಗಳಿಗೆ ಕಾರಣ ಏನು? ಪೆಟ್ರೋಲ್, ಡೀಸೆಲ್‍ಗಳ ಬೆಲೆಯೇರಿಕೆಯೆ? ರಸ್ತೆ ಟೋಲ್‍ಗಳ ಸುಲಿಗೆಯೆ? ಮುಂಬೈನಿಂದ ಲಾರಿಯೊಂದು ಬೆಂಗಳೂರಿಗೆ ಬರಲು 24000 ರೂಪಾಯಿಗೂ ಹೆಚ್ಚು ಟೋಲ್ ಕಟ್ಟಬೇಕು.

ಕಾರ್ಮಿಕರಿಗೆ ‘ಶ್ರಮಿಕ್ ನಿವಾಸ್’ ಬೃಹತ್ ವಸತಿ ಸಮುಚ್ಚಯ

ಇದನ್ನು ಕೊಂಡುಕೊಳ್ಳುವ ಜನರೆ ತಾನೇ? ಹಾಲು, ಮೊಸರು, ಮಜ್ಜಿಗೆ, ಎಳನೀರು, ಅಕ್ಕಿ, ಗೋ, ಪೆನ್ನು, ಪೇಪರು ಸೇರಿದಂತೆ ಎಲ್ಲದರ ಮೇಲೆ ತೆರಿಗೆ ವಿಸಿ ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರ ಜನರಿಗೆ ಏನು ಕೊಟ್ಟಿದೆ? ಬಡ ಜನರ ಬದುಕನ್ನು ಅಡ್ಡಡ್ಡ ಸೀಳಿ ಬರ್ಬಾದು ಮಾಡಿದ್ದು ಬಿಟ್ಟರೆ ಬೇರೇನು ಸಾಧನೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಕೃಷಿಕರ, ಬಡವರ, ಮಧ್ಯಮ ವರ್ಗಗಳ ಜನರ ಆದಾಯ ಯಾವ ರೀತಿಯಿಂದಲೂ ಹೆಚ್ಚಾಗಿಲ್ಲ ಎಂಬುದನ್ನು ಸರ್ಕಾರದ ಅಂಕಿ ಅಂಶಗಳೆ ತೋರಿಸುತ್ತಿವೆ. ನಿಮ್ಮ ಯಾತ್ರೆಗಳಲ್ಲಿ ಈ ಸಾಧನೆಗಳನ್ನು ಹೇಳಿಕೊಳ್ಳಿ. ನಿಮ್ಮ ಸಂಕಲ್ಪ, ಯಾತ್ರೆಯ ಪುರುಷಾರ್ಥ ಜನರಿಗೆ ಗೊತ್ತಾಗಲಿ. ಬಿಜೆಪಿ ಎಂದರೆ ಕುರಿ ಕಾವಲಿಗೆ ನೇಮಿಸಿದ ತೋಳ ಎನ್ನುವ ಸಿಟ್ಟು ಜನರಲ್ಲಿ ಹೆಪ್ಪುಗಟ್ಟಿರುವುದನ್ನು ನಾನು ಹೋದ ಕಡೆಗಳಲ್ಲೆಲ್ಲಾ ಗಮನಿಸಿದ್ದೀನಿ.

ನಿಷ್ಕ್ರಿಯಗೊಂಡ ಉಪಗ್ರಹದ ಮರು ಪ್ರಯೋಗಕ್ಕೆ ಇಸ್ರೋ ಸಿದ್ಧತೆ

ರಾಜ್ಯದ ಜನರು ಈ ಬಾರಿ ಎಚ್ಚೆತ್ತಿದ್ದಾರೆ. ತಮ್ಮನ್ನು ಕುರಿಗಳಾಗಿಸುವುದು ಸಾಧ್ಯವಿಲ್ಲ ಎಂದು ಅನೇಕ ಕಡೆ ಬಿಜೆಪಿಗರ ಮುಖಕ್ಕೆ ರಾಚುವಂತೆ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಅದು ಬಿಜೆಪಿಯನ್ನು ಬಿರುಗಾಳಿಯಂತೆ ಗುಡಿಸಿ ಹಾಕಲಿದೆ ಎಂದಿದ್ದಾರೆ.

tax price rise, siddaramaiah, BJP, Vijaya Sankalpa, Yatra,

Articles You Might Like

Share This Article