Wednesday, May 31, 2023
Homeಇದೀಗ ಬಂದ ಸುದ್ದಿಸಚಿವ ಸ್ಥಾನ ಸಿಗದಿರುವುದು ಅಸಮಾಧಾನ ತಂದಿದೆ : ಟಿ.ಬಿ.ಜಯಚಂದ್ರ

ಸಚಿವ ಸ್ಥಾನ ಸಿಗದಿರುವುದು ಅಸಮಾಧಾನ ತಂದಿದೆ : ಟಿ.ಬಿ.ಜಯಚಂದ್ರ

- Advertisement -

ಬೆಂಗಳೂರು,ಮೇ 27- ನಾನು ಪ್ರಾಮಾಣಿಕ ಕಾಂಗ್ರೆಸಿಗ. ಕಾರ್ಯಕರ್ತನಾಗಿ ದುಡಿದು ಪಕ್ಷಕ್ಕೆ ಶಕ್ತಿ ತುಂಬಿದ್ದೇನೆ. ನನಗೆ ಸಚಿವ ಸ್ಥಾನ ದೊರೆಯದಿರುವುದು ಸಹಜವಾಗಿ ಅಸಮಾಧಾನ ತಂದಿದೆ ಎಂದು ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ದೆಹಲಿಯಲ್ಲಿ ವಿಮಾನಕ್ಕೆ ಬಂದು ವಿಮಾನ ಹತ್ತುವರೆಗೂ ಸಂಭನೀಯ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಇತ್ತು,ಅನಂತರ ಏನಾಯಿತು ಎಂದು ಗೋತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು 1978ರಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದೆ. ನಾನು ಶಾಸಕನಾಗಿದ್ದಾಗ, ಈಗ ಮಂತ್ರಿ ಮಂಡಲದಲ್ಲಿ ಸಚಿವರಾಗಿರುವ ಯಾರು ಶಾಸನ ಸಭೆಯಲ್ಲಿ ಇರಲಿಲ್ಲ. ಏಳನೇ ಬಾರಿ ವಿಧಾನಸಭೆ ಪ್ರವೇಶ ಮಾಡುತ್ತಿದ್ದೇನೆ. ಅತ್ಯಂತ ಹಿರಿಯ ಶಾಸಕನಾಗಿರುವ ನನಗೆ ಅವಕಾಶ ಸಿಗಬೇಕಿತ್ತು. ಇದನ್ನು ನಾನು ನಿರೀಕ್ಷೆ ಇರಲಿಲ್ಲ.

ಡಬಲ್ ಧಮಾಕ ಖುಷಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್

ಫಲಿತಾಂಶ ಬಂದ ಮಾರನೇ ದಿನದಿಂದಲೂ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಸಂಪರ್ಕದಲ್ಲಿ ಇದ್ದೆ. ನನ್ನನ್ನು ಸಂಪುಟದಿಂದ ಕೈ ಬಿಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಸಣ್ಣ ಸಮುದಾಯಗಳಿನ್ನು ಗುರುತಿಸಿ ಸಂಪುಟದಲ್ಲಿ ಅವಕಾಶ ನೀಡಿದೆ. ವಿಧಾನಸಭೆ ಅಥವಾ ವಿಧಾನ ಪರಿಷತ ಸದಸ್ಯರಾಗದಿರುವವರನ್ನು ಸಮುದಾಯಕ್ಕೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಮಂತ್ರಿ ಮಂಡಳಕ್ಕೆ ಸೇರಿಸಿಕೊಳ್ಳಲಾಗಿದೆ. ಒಕ್ಕಲಿಗರಲ್ಲಿ ಕುಂಚಿಗ ಸಮುದಾಯ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಸೇರಿ 18 ಲೋಕಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಈ ಮೊದಲು ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡಿದ್ದರು ಎಂದು ಹೇಳಿದ್ದಾರೆ..

#TBJayachandra, #CabinetExpansion,

- Advertisement -
RELATED ARTICLES
- Advertisment -

Most Popular