ಮೊಬೈಲ್‍ಗಾಗಿ ಪ್ರಾಣ ಬಿಟ್ಟ ಶಿಕ್ಷಕ..!

ಶಹದೋಲ್, ಮೇ 17- ಯಾಮಾರಿಸಿ ಮೊಬೈಲ್ ಪಡೆದು ಓಡಿ ಹೋಗುತ್ತಿದ್ದ ಹಿಡಿಯಲು ಯತ್ನಿಸಿದ್ದ 54 ವರ್ಷದ ಶಾಲಾ ಶಿಕ್ಷಕ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯ ಶಹದೋಲ್ ರೈಲು ನಿಲ್ದಾಣದಲ್ಲಿ ನಡೆದಿದೆ.

ಮೃತ ಮನೋಜ್ ನೇಮ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ದುರ್ಗ್-ಅಜ್ಮೀರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತ ವ್ಯಕ್ತಿ ಯಾರಿಗೂ ತುರ್ತು ಕರೆ ಮಾಡಲು ಮೊಬೈಲ್ ಫೋನ್ ಕೇಳಿದ್ದಾರೆ. ಫೋನ್ ಪಡೆದ ವ್ಯಕ್ತಿ ಶಹದೋಲ್ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ವೇಗ ಕಡಿಮೆಯಾದಾಗ, ಫೋನ್‍ನೊಂದಿಗೆ ಓಡಿ ಹೋಗಲು ಪ್ರಾರಂಭಿಸಿದ್ದಾನೆ.

ಆತನನ್ನು ಹಿಡಿಯಲು ಮನೋಜ್ ನೇಮಾ ಓಡಲಾರಂಭಿಸಿದ್ದಾರೆ. ಟ್ರ್ಯಾಕ್ ಮೇಲೆ ಓಡುವಾಗ ಜಾರಿ ಬಿದ್ದಿದ್ದು, ಚಲಿಸುತ್ತುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.

ಮೊಬೈಲ್ ಕದ್ದೊಯ್ಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಆತನನ್ನು ಶಹದೋಲ್‍ನ ಖೇರಿ ಗ್ರಾಮದ ನಿವಾಸಿ ರಾಜೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಆತನಿಂದ ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ.