ಟಿ-20 ವಿಶ್ವಕಪ್ : ಆಂಗ್ಲರಿಗೆ ಐತಿಹಾಸಿಕ ಗೆಲುವು, ಭಾರತಕ್ಕೆ ಹೀನಾಯ ಸೋಲು

Social Share

ಅಡಿಲೇಡ್,ನ.10-ಟಿ-20 ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಐತಿಹಾಸಿಕ ವಿಜಯ ಸಾಸಿದೆ. ಇಲ್ಲಿ ನಡೆದ ಎರಡನೇ ಸಮಿಪೈನಲ್‍ನಲ್ಲಿ ಭಾರತ ತಂಡದ ವಿರುದ್ದ ವಿಕೆಟ್ ನಷ್ಠವಿಲ್ಲದೆ 10 ವಿಕೆಟ್‍ಗಳ ಭರ್ಜರಿ ಗೆಲವು ಸಾಧಿಸಿರುವ ಇಂಗ್ಲೆಂಡ್ ಪೈನಲ್‍ಗೆ ಅದ್ವಿತೀಯ ಪ್ರವೇಶ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಯ್ಲಿ ಅವರ ಜವಾಬ್ದಾರಿಯಿತ ಆಟದ ನೆರವಿನಿಂದ 168 ರನ್ ಕಲೆಹಾಕಿತು.

ಇದಕ್ಕೆ ಉತ್ತರವಾಗಿ ರೋಚಕ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್‍ನಾಯಕ ಬಟ್ಲರ್ ಮತ್ತು ಅಲೆಕ್ಸ್ ಹಲೆಸ್ ಜೋಡಿ ಯಾವುದೇ ಸಂದರ್ಭದಲ್ಲೂ ವಿಚಲಿತರಾಗದೆ ಅದ್ಬುತ ಪ್ರದರ್ಶನ ನೀಡಿ ಸುಲಭವಾಗಿ 16ನೇ ಓವರ್‍ನಲ್ಲೇ ತಂಡವನ್ನು ಗೆಲುವಿನ ಗೆರೆ ದಾಟಿಸಿದರು .

ರಸ್ತೆ ಡಾಂಬರು ಕಿತ್ತುಬಂದರೆ ಎಂಜಿನಿಯರ್‌ಗಳಿಗೆ ಕಾದಿದೆ ಮಾರಿಹಬ್ಬ

ಭಾರತದ ಯಾವುದೇ ಬೌಲರ್ ವಿಕೆಟ್ ಪಡೆಯಲು ಸಾಧ್ಯವಾಗದೆ ಹೀನಾಯ ಸೋಲು ಕಂಡಿದ್ದು,15 ವರ್ಷದ ವಿಶ್ವಕಪ್ ಬರ ಮತ್ತೆ ಮುದುವರೆದಿದೆ.ಬಟ್ಲರ್ 49 ಚೆಂಡುಗಳಲ್ಲಿ ಅಜೇಯ 80 ರನ್ ಭಾರಿಸಿದರೆ ಹಲೆಸ್ 47 ಚೆಂಡುಗಲ್ಲಿ 86 ರನ್ ಗಳಿಸಿದರು.

ಅಂತಿಮವಾಗಿ ಇಂಗ್ಲೆಂಡ್ 10 ವಿಕೆಟ್‍ಗಳ ಐತಿಹಾಸಿಕ ಗೆಲುವು ದಾಖಲಿಸಿದೆ. .ಎಂಇಜಿ ಮೈದಾನದಲ್ಲಿ ನಡೆಯುವ ಪೈನಲ್‍ನಲ್ಲಿ ಪಾಕಿಸ್ತಾನ – ಇಂಗ್ಲೆಂಡ್ ಚಾಂಪಿಯನ್ ಪಟ್ಟಕ್ಕೆ ಸೆಣೆಸಾಟ ನಡೆಯಲಿದೆ.

ಮತ್ತೊಂದು ವಿವಾದ : `ಹಿಂದೂ’ ಶಬ್ದದ ಸತ್ಯಶೋಧನೆಗೆ ಮುಂದಾದ ಸತೀಶ್

Articles You Might Like

Share This Article