ಚಾಕೊಲೇಟ್ ತಿಂದ 9 ವರ್ಷದ ಬಾಲಕ ಉಸಿರುಗಟ್ಟಿ ಸಾವು

Social Share

ಹೈದರಾಬಾದ್,ನ.28- ಶಾಲೆಯಲ್ಲಿ ಚಾಕೊಲೇಟ್ ತಿಂದ 9 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ವಾರಂಗಲ್‍ನಲ್ಲಿ ನಡೆದಿದೆ.
ಮೃತನನ್ನು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದೆ.

ನಗರದ ಶಾರದಾ ಪ್ರೌಢಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ ಸಂದೀಪ್ ಸಿಂಗ್ ಶಾಲೆಗೆ ಪ್ರತಿ ದಿನ ಚಾಕಲೇಟ್ ಒಯ್ಯುವುದು ಅಭ್ಯಾಸವಾಗಿತ್ತು. ಅದೇ ರೀತಿ ಕಳೆದ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಚಾಕಲೇಟ್ ತಿನ್ನುತ್ತಿದ್ದ ಬಾಲಕ ಉಸಿರುಗಟ್ಟಿಕೊಂಡಿದ್ದಾನೆ.

ಕೂಡಲೆ ಎಚ್ಚೆತ್ತ ಶಿಕ್ಷಕರು ಗಂಟಲಿಗೆ ಸಿಕ್ಕಿಕೊಂಡಿದ ಚಾಕಲೇಟ್ ತೆಗೆಯಲು ಪ್ರಯತ್ನಿಸಿ ನಂತರ ವಾರಂಗಲ್‍ನ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು ಎಂದು ದ್ದಾಲೀಸರು ತಿಳಿಸಿದ್ದಾರೆ.

ಶಿಕ್ಷಕಿಗೆ ಕಿರುಕುಳ ನೀಡಿದ 4 ವಿದ್ಯಾರ್ಥಿಗಳ ಬಂಧನ

ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಮಾಹಿತಿ ನೀಡಿದೆ. ಆದರೆ ಕುಟುಂಬದವರು ಯಾವುದೇ ದೂರು ನೀಡಿಲ್ಲ ಮತ್ತು ಯಾವುದೇ ಪ್ರಕರಣ ದಾಖಲಾಗಿಲ್ಲ ಪೊಲೀಸರ ಪ್ರಕಾರ ಬಾಲಕನ ತಂದೆ ಆಸ್ಟ್ರೇಲಿಯಾದಿಂದ ಚಾಕಲೇಟ್‍ಗಳನ್ನು ತಂದಿದ್ದರು ಬಾಲಕ ಚಾಕಲೆಟ್ ಪ್ರಿಯನಾಗಿದ್ದ ಆದರೆ ಅದೇ ಸಾವಿಗಡ ಕಾರಣವಾಗಿದೆ.

#Telangana, #9yearold, #dies, #choking, #chocolate, #Warangal,

Articles You Might Like

Share This Article