ವೈರಲ್ ಆಯ್ತು ಬಿಜೆಪಿ ಮುಖಂಡನ ಪುತ್ರನ ರೌಡಿಸಂ ವಿಡಿಯೋ

Social Share

ಹೈದ್ರಾಬಾದ್,ಜ.18- ತೆಲಂಗಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್‍ಕುಮಾರ್ ಪುತ್ರನ ರೌಡಿಸಂ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹೈದ್ರಾಬಾದ್‍ನ ಖಾಸಗಿ ಕಾಲೇಜಿನಲ್ಲಿ ಸಂಜಯ್‍ಕುಮಾರ್ ಪುತ್ರ ಬಂಡಿ ಭಗೀರಥ್ ಸಹ ವಿದ್ಯಾರ್ಥಿ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ದೃಶ್ಯಗಳು ವೈರಲ್ ಆಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾಲೇಜ್ ಆವರಣದಲ್ಲಿ ಭಗೀರಥ್ ಅವರು ಶ್ರೀರಾಮ್ ಎಂಬ ವಿದ್ಯಾರ್ಥಿಗೆ ಪದೇ ಪದೇ ಕಪಾಳ ಮೋಕ್ಷ ಮಾಡಿದ್ದು, ಈ ಘನಂದಾರಿ ಕಾರ್ಯಕ್ಕೆ ಆತನ ಸ್ನೇಹಿತನು ಸಹಕರಿಸಿರುವುದು ಕಂಡು ಬಂದಿದೆ. ಏಕಾಏಕಿ ಹಾಸ್ಟೆಲ್‍ಗೆ ನುಗ್ಗಿರುವ ಭಗೀರಥನ ಟೀಂ ಶ್ರೀರಾಮನ ಮುಖಕ್ಕೆ ಗುದ್ದಿದ್ದಾನೆ ನಂತರ ಇತರರು ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಕಾಣುತ್ತಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಸಮಜಾಯಿಷಿ ನೀಡಿರುವ ಭಗೀರಥ್ ನನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಶ್ರೀರಾಮ್ ಅನುಚಿತವಾಗಿ ವರ್ತಿಸಿದ್ದರಿಂದ ಆತನ ಮೇಲೆ ಹಲ್ಲೆ ನಡೆಸಬೇಕಾಯಿತು ಎಂದು ಸಬೂಬು ಹೇಳಿದ್ದಾನೆ.

ಬಿಬಿಎಂಪಿಗೆ ಅಂಟಿದ ‘ಭ್ರಷ್ಟ’ರೋಗದಿಂದ ‘ಗುಂಡಿ ಸಿಟಿ’ಯಾದ ಬೆಂಗಳೂರು

ಹೌದು ನಾನು ಭಗೀರಥನ ಸ್ನೇಹಿತನ ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದೇನೆ ಮತ್ತು ಇದನ್ನು ಪ್ರಶ್ನಿಸಿದ ಭಗೀರಥನೊಂದಿಗೂ ಉದಾಸೀನವಾಗಿ ಮಾತನಾಡಿದ್ದರಿಂದ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶ್ರೀರಾಮ್ ತಪ್ಪೋಪ್ಪಿಕೊಂಡಿರುವ ವಿಡಿಯೋ ಬಿಡುಗಡೆಯಾಗಿದೆ.

ಈ ಘಟನೆ ನಡೆದು ಸುಮಾರು ಎರಡು ತಿಂಗಳಾಗಿದೆ ನಂತರ ನಾವು ರಾಜಿ ಮಾಡಿಕೊಂಡಿದ್ದೇವೆ ಆದರೂ ಇದೀಗ ವಿಡಿಯೋ ವೈರಲ್ ಆಗಿರುವುದು ದುಃಖಕರ ವಿಷಯ ದಯವಿಟ್ಟು ಈ ವಿಡಿಯೋ ಬಳಸುವುದನ್ನು ನಿಲ್ಲಿಸಿ ಎಂದು ಶ್ರೀರಾಮ್ ಮನವಿ ಮಾಡಿಕೊಂಡಿದ್ದಾನೆ.

ಪತ್ನಿಯನ್ನು ಕೊಂದು ಭಾವನಿಗೆ ಸಂದೇಶ ಕಳುಹಿಸಿದ್ದ ಆರೋಪಿಗೆ ಶೋಧ

ಎರಡು ತಿಂಗಳ ಹಿಂದೆ ನಡೆದ ಘಟನೆಗೆ ಮರು ಜೀವ ನೀಡಿ ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಪಿತೂರಿ ಇದಾಗಿದೆ ಎಂದು ಬಂಡಿ ಸಂಜಯ್‍ಕುಮಾರ್ ಆರೋಪಿಸಿದ್ದಾರೆ.
ಕಾಲೇಜಿನವರು ನೀಡಿರುವ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Telangana, BJP president, Bandi Sanjay, son, brutally, thrashes, student,

Articles You Might Like

Share This Article