ಬಿ.ಎಲ್.ಸಂತೋಷ್‌ಗೆ ಬಂಧನದ ಭೀತಿ

Social Share

ನವದೆಹಲಿ,ನ.19- ತೆಲಂಗಾಣದ ಆಡಳಿತರೂಢ ಟಿಆರ್‍ಎಸ್ ಶಾಸಕರನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ವಿಚಾರಣೆಗೆ ಹಾಜರಾಗಬೇಕು ಎಂದು ವಿಶೇಷ ತನಿಖಾ ತಂಡ ಸಮನ್ಸ್ ಜಾರಿ ಮಾಡಿದೆ.

ಒಂದು ವೇಳೆ 21ರೊಳಗೆ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲಾಗುತ್ತದೆ ಎಂದು ಸಮನ್ಸ್‍ನಲ್ಲಿ ಎಸ್‍ಐಟಿ ಬಿ.ಎಲ್.ಸಂತೋಷ್‍ಗೆ ಎಚ್ಚರಿಸಿದೆ. ಶಾಸಕರ ಅಪಹರಣ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ತೆಲಂಗಾಣ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು.

ಜೊತೆಗೆ ಎಸ್‍ಐಟಿ ತನಿಖೆಯನ್ನು ನ್ಯಾಯಾೀಧಿಶರ ನೇತೃತ್ವದಲ್ಲೆ ತನಿಖೆ ನಡೆಸಬೇಕೆಂದು ಮಾಡಿಕೊಂಡ ಮನವಿ ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ಎಸ್‍ಐಟಿ ಸಂತೋಷ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ನಾಳೆ ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬಿಜೆಪಿ ST ಸಮಾವೇಶ

ಇದೀಗ ಸಂತೋಷ್ ಅವರಿಗೆ ಬಂಧನದ ಭೀತಿ ಎದುರಾಗಿದೆ. ನ.29ರಂದು ತನಿಖೆಯ ಪ್ರಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚನೆ ಕೊಡಲಾಗಿದೆ. ಶಾಸಕರ ಅಪಹರಣ ಪ್ರಕರಣ ಕುರಿತು ತೆಲಂಗಾಣ ಸರ್ಕಾರ ನ.9ರಂದು ತನಿಖೆಗಾಗಿ ಎಸ್‍ಐಟಿಯನ್ನು ರಚಿಸಿತ್ತು. ಇದರಲ್ಲಿ ಹೈದರಬಾದ್ ಪೊಲೀಸ್ ಆಯುಕ್ತರು ಸೇರಿದಂತೆ ಒಟ್ಟು 6 ಜನ ತನಿಖಾ ತಂಡದಲ್ಲಿದ್ದಾರೆ.

ಈಗಾಗಲೇ ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮ, ಸೀಮ್ಮಯಾಜಿ, ಆನಂದ್ ನಂದಕುಮಾರ್ ಅವರನ್ನು ಹೈದರಾಬಾದ್ ಸಮೀಪ ಇರುವ ಮೊಹಿದಾಬಾದ್‍ನ ಫಾರಂಹೌಸ್‍ನಲ್ಲಿ ಬಂಧಿಸಲಾಗಿತ್ತು. ಟಿಆರ್‍ಎಸ್ ಶಾಸಕರಿಗೆ ಹಣದ ಆಮಿಷವೊಡ್ಡಿ ಖರೀದಿ ಮಾಡಲು ಯತ್ನಿಸಲಾಗಿತ್ತು ಎಂಬ ಆರೋಪವಿದೆ.

ಮಕ್ಕಳಾಗಲಿಲ್ಲವೆಂದು ರುಬ್ಬುಕಲ್ಲಿನಿಂದ ಜಜ್ಜಿ ಮಹಿಳೆಯ ಕೊಲೆ

ಸೈಬರಾಬಾದ್ ಪೊಲೀಸರು ದಾಳಿ ನಡೆಸಿ ಮೂವರು ಶಾಸಕರಿಗೆ ತಲಾ 100 ಕೋಟಿ ಹಣ ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಶಾಸಕ ಪೈಲೆಟ್ ರೆಡ್ಡಿ ಆರೋಪಿಸಿದ್ದರು.

ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಷಾ ಮತ್ತಿತರರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.

Telangana, SIT, summons, BJP, leader, BL Santosh,

Articles You Might Like

Share This Article