“ರ‍್ಯಾಗಿಂಗ್ ಮಾಡಿದವರು ಸೈಫ್ ಆಗಿರಲಿ ಸತೀಶ್ ಆಗಿರಲಿ ಬೀಡಲ್ಲ”

Social Share

ಹೈದರಾಬಾದ್,ಫೆ.28- ರ‍್ಯಾಗಿಂಗ್ ಮಾಡಿ ವಿದ್ಯಾರ್ಥಿನಿ ಸಾವಿಗೆ ಕಾರಣರಾದವರು ಸೈಫ್ ಆಗಿರಲಿ ಸತೀಶ್ ಆಗಿರಲಿ ಅವರನ್ನು ಸಮ್ಮನೆ ಬಿಡುವುದಿಲ್ಲ ಎಂದು ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಭರವಸೆ ನೀಡಿದ್ದಾರೆ.

ಹೈದ್ರಾಬಾದ್‍ನ ಕಾಕತೀಯ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಪ್ರೀತಿ ಎಂಬ ಯುವತಿ ರ‍್ಯಾಗಿಂಗ್‍ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಾತನಾಡುತ್ತಿದ್ದರು.

ಸುಪ್ರೀಂ ಕೋರ್ಟ್ ಕದ ತಟ್ಟಿದ ಸಿಸೋಡಿಯಾ

ಹಿರಿಯ ವಿದ್ಯಾರ್ಥಿಗಳ ಕೀಟಲೆಯಿಂದ ಮನನೊಂದಿದ್ದ ಪ್ರೀತಿ ಚುಚ್ಚುಮದ್ದು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ತಂದೆಯ ನೀಡಿದ ದೂರಿನ ಮೇರೆಗೆ, ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಮೊಹಮ್ಮದ್ ಅಲಿ ಸೈಫ್ ಅವರನ್ನು ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಮತ್ತು ರ‍್ಯಾಗಿಂಗ್ ವಿರೋಧಿ ದೌರ್ಜನ್ಯ, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳದ ಆರೋಪದ ಮೇಲೆ ಬಂಧಿಸಿದ್ದರು.

ನಾನು ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ : ಎಚ್‍ಡಿಕೆ

ಹನಮಕೊಂಡ ಜಿಲ್ಲೆಯಲ್ಲಿ ಸಾರ್ವಜನಿಕ ಭಾಷಣದಲ್ಲಿ, ಘಟನೆಗೆ ಕಾರಣರಾದ ಯಾರೇ ಆದರೂ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಸೈಫ್ ಆಗಲಿ, ಸತೀಶ್ ಆಗಲಿ ಅದಕ್ಕೆ ಕಾರಣರಾದವರನ್ನು ಬಿಡುವುದಿಲ್ಲ ವಿನಾಕಾರಣ ಬಿಜೆಪಿಯವರು ಈ ಪ್ರಕರಣವನ್ನು ರಾಜಕಾರಣಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Telangana, Student, Suicide Case, minister, KT Rama Rao,

Articles You Might Like

Share This Article