CBI ತನಿಖೆಗೆ ವಹಿಸಿದ್ದ ಪ್ರಕರಣಗಳನ್ನು ಹಿಂಪಡೆದ ತೆಲಂಗಾಣ ಸರ್ಕಾರ

Social Share

ಹೈದರಾಬಾದ್,ಅ.30- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಹದಗೆಟ್ಟ ಬೆನ್ನಲ್ಲೇ ಈ ಮೊದಲು ಸಿಬಿಐ ತನಿಖೆಗೆ ಸಹಮತಿಸಿದ್ದ ಎಲ್ಲ ಅನುಮತಿಗಳನ್ನು ತೆಲಂಗಾಣ ಸರ್ಕಾರ ಹಿಂಪಡೆದಿದೆ.

ಬಿಜೆಪಿ ತೆಲಂಗಾಣದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ. ಶಾಸಕರ ಖರೀದಿಗಾಗಿ 15 ಕೋಟಿ ರೂ.ಗಳನ್ನು ತರಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಬಿಜೆಪಿ ಹೈಕೋರ್ಟ್ ಮೊರೆಹೋಗಿದ್ದು, ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿತ್ತು. ವಿಚಾರಣೆ ವೇಳೆ ಹೈಕೋರ್ಟ್‍ನ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ರಾಜ್ಯ ಸರ್ಕಾರದ ನಿಲುವನ್ನು ತಿಳಿಸಿದ್ದಾರೆ.

ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ..?

ಆ.30ರಂದು ರಾಜ್ಯ ಸರ್ಕಾರ ಈ ಮೊದಲು ಸಿಬಿಐ ತನಿಖೆಗೆ ನೀಡಿದ್ದ ಎಲ್ಲ ಅನುಮತಿಗಳನ್ನು ಹಿಂಪಡೆದಿದೆ. ದೆಹಲಿ ಪೊಲೀಸ್ ಎಷ್ಟಾಬ್ಲಿಶ್ಮೆಂಟ್ ಆ್ಯಕ್ಟ್ ಸೆಕ್ಷನ್ 6ರಡಿ ರಾಜ್ಯ ಸರ್ಕಾರಕ್ಕೆ ಅನುಮತಿ ಹಿಂಪಡೆಯುವ ಅಧಿಕಾರವಿದೆ.
ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಸಿಬಿಐ ತನಿಖೆಯ ಅನುಮತಿಯನ್ನು ವಾಪಸ್ ಪಡೆದಿದೆ ಎಂದು ಅಡ್ವೋಕೇಟ್ ಜನರಲ್ ತಿಳಿಸಿದ್ದಾರೆ.

ಪಾದಯಾತ್ರೆಯಲ್ಲಿ ಇದ್ದಕ್ಕಿದ್ದಂತೆ ಓಡಿದ ರಾಹುಲ್, ಭದ್ರತಾ ಸಿಬ್ಬಂದಿ ಕಕ್ಕಾಬಿಕ್ಕಿ

ಇತ್ತೀಚೆಗೆ ಬಿಜೆಪಿ ಮತ್ತು ರಾಜ್ಯದಲ್ಲಿ ಆಡಳಿತಾರೂಢ ಟಿಎಸ್‍ಆರ್ ನಡುವೆ ಸಂಬಂಧಗಳು ಹದಗೆಟ್ಟಿದ್ದು, ಗಂಭೀರ ಸ್ವರೂಪದ ಆರೋಪ, ಪ್ರತ್ಯಾರೋಪಗಳು ವಿನಿಮಯವಾಗುತ್ತಿವೆ.

Articles You Might Like

Share This Article