ಹೈದರಾಬಾದ್,ಆ.2- ಮಹಿಳೆಯೊಬ್ಬರು ತನ್ನ ಅಸ್ವಸ್ಥ ಹೆಣ್ಣು ಮಗುವನ್ನು ಸಂಪ್‍ನಲ್ಲಿ ಎಸೆದು ಕೊಂದು ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಹಿಳೆಗೆ ಇಬ್ಬರು ಮಕ್ಕಳಿದ್ದು, ಮೃತ ಮಗು ಒಂದು ವರ್ಷದ ಹೆಣ್ಣು ಮಗುವಾಗಿದೆ. ಈ ಮಗು ಅಸ್ವಸ್ಥವಾಗಿದ್ದು, ಅನಾರೋಗ್ಯದ ಕಾರಣ ಈ ಮಗು ತನಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಮಗುವನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ವಶ್ಥ ತನ್ನ ಹೆಣ್ಣು ಮಗುವನ್ನು ನಿನ್ನೆ ಇಲ್ಲಿನ ಸಂಪ್‍ನಲ್ಲಿ ಎಸೆದುಬಿಟ್ಟಿದ್ದಾಳೆ. ಮಗು ಸಾವಿಗೆ ಕೆಲವು ಚೈನ್ ಸ್ನಾಚರ್ (ಸರಗಳ್ಳರು) ಕಾರಣ ಎಂದು ನಂಬಿಸಲು ಪ್ರಯತ್ನಿಸಿದ್ದಾಳೆ ಎಂದು ತಿಳಿಸಿದ್ದಾರೆ.
ತನ್ನ ಮನೆಯ ಬಳಿ ಸರ ಕಸಿದುಕೊಳ್ಳಲು ಕಳ್ಳರು ಯತ್ನಿಸಿದ ನಂತರ ಸಂಪ್‍ಗೆ ಮಗು ಬಿದ್ದುಹೋಯಿತು ಎಂದು ಆರಂಭದಲ್ಲಿ ಹೇಳಿಕೊಂಡಿದ್ದಳು.
ಹೆಚ್ಚಿನ ವಿಚಾರಣೆ ನಡೆಸಿದಾಗ ಚೈನ್ ಸ್ನ್ಯಾಚಿಂಗ್ ಕಾರಣವಲ್ಲ ಎಂಬುದು ಗೊತ್ತಾಗಿದೆ. ಮಗುವನ್ನು ತಾನೇ ಕೊಂದು ಹಾಕಿದ್ದಾಗಿ ನಿಜ ಬಾಯ್ಬಿಟ್ಟಿದ್ದಾಳೆ.